alex Certify ನಿಮ್ಮ ಮೊಬೈಲ್‌ ನಲ್ಲಿ ಈ ಅಪ್ಲಿಕೇಷನ್ಸ್‌ ಇದ್ರೆ ಕೂಡಲೇ ಡಿಲೀಟ್ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮೊಬೈಲ್‌ ನಲ್ಲಿ ಈ ಅಪ್ಲಿಕೇಷನ್ಸ್‌ ಇದ್ರೆ ಕೂಡಲೇ ಡಿಲೀಟ್ ಮಾಡಿ

google, google play store, android, android apps, apps, app, cybersecurity, security, joker malware,

ಜೋಕರ್ ಮಾಲ್‌ವೇರ್ ಹಾವಳಿಗೆ ಒಳಗಾದ ಹಲವಾರು ಅಪ್ಲಿಕೇಷನ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಲಾಗಿದೆ. ಇವೆಲ್ಲ ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ಈಗ್ಲೂ ಇದ್ದರೆ ಈಗ್ಲೇ ಅದನ್ನು ಅನ್ ಇನ್ಸ್ಟಾಲ್ ಮಾಡಿ. ಇಲ್ಲವೆಂದ್ರೆ ನಿಮ್ಮ ಖಾತೆ ಖಾಲಿಯಾಗುವ ಸಾಧ್ಯತೆಯಿದೆ.

ಕ್ಯಾಲಿಫೋರ್ನಿಯಾ ಮೂಲದ ಐಟಿ ಸೆಕ್ಯುರಿಟಿ ಕಂಪನಿ Zscaler ಪ್ರಕಾರ, 17 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಇತ್ತೀಚೆಗೆ ಜೋಕರ್ ಮಾಲ್‌ವೇರ್‌ ಹಾವಳಿಗೆ ಒಳಗಾಗಿವೆ.  ಜೋಕರ್ ಮಾಲ್ವೇರ್, ಎಸ್ಎಂಎಸ್, ಕಾಂಟೆಕ್ಟ್ ಮತ್ತು ಡಿವೈಸ್ ಮಾಹಿತಿಯನ್ನು ಕದಿಯುತ್ತದೆ. ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲೂ ಈ ಕೆಳಗಿನ ಅಪ್ಲಿಕೇಷನ್ ಇದ್ದರೆ ಡಿಲೀಟ್ ಮಾಡಿ.

ಪಿಡಿಎಫ್ ಸ್ಕ್ಯಾನರ್, ಮಿಂಟ್ ಲೀಫ್ ಮೆಸ್ಸೆಂಜ್, ಯುನಿಕ್ಯೂ ಕೀ ಬೋರ್ಡ್, ಟ್ಯಾಂಗ್ರಾಮ್ ಆಪ್ ಲಾಕ್, ಡೈರೆಕ್ಟ್ ಮೆಸ್ಸೆಂಜರ್, ಪ್ರೈವೇಟ್ ಎಸ್ಎಂಎಸ್, ಒನ್ ಸೆಂಟೆನ್ಸ್ ಟ್ರಾನ್ಸ್ ಲೇಟರ್, ಸ್ಟೈಲಿ ಫೋಟೋ ಕೊಲಾಜ್, ಮೆಟಿಕ್ಯುಲಸ್ ಸ್ಕ್ಯಾನರ್, ಡಿಸೈರ್ ಟ್ರಾನ್ಸ್ ಲೇಟರ್, ಟ್ಯಾಲೆಂಟ್ ಫೋಟೋ ಅಡಿಟ್, ಕೇರ್ ಮೆಸ್ಸೇಜ್, ಪಾರ್ಟ್ ಮೆಸ್ಸೇಜ್, ಪೇಪರ್ ಡಾಕ್ ಸ್ಕ್ಯಾನರ್, ಬ್ಯ್ಲೂ ಸ್ಕ್ಯಾನರ್, ಹಮ್ಮಿಂಗ್ ಬರ್ಡ್ ಪಿಡಿಎಫ್ ಕನ್ವರ್ಟರ್.

ಈ ಅಪ್ಲಿಕೇಷನ್ ಗಳನ್ನು ಗೂಗಲ್ ಪ್ಲೇಸ್ಟೋರ್ ನಿಂದ ತೆಗೆದು ಹಾಕಲಾಗಿದೆ. ಯಾವುದೇ ಅಪ್ಲಿಕೇಷನ್ ಡೌನ್ಲೋಡ್ ಮಾಡುವ ಮೊದಲು ಕಮೆಂಟ್ ಗಳನ್ನು ಮತ್ತು ವಿಮರ್ಶೆಗಳನ್ನು ಓದಬೇಕು. ಅಪ್ಲಿಕೇಷನ್ ಸುರಕ್ಷಿತ ಎಂಬುದು ಗೊತ್ತಾದಲ್ಲಿ ಮಾತ್ರ ಡೌನ್ಲೋಡ್ ಮಾಡಿಕೊಳ್ಳಿ.

  • All Good PDF Scanner
  • Mint Leaf Message-Your Private Message
  • Unique Keyboard – Fancy Fonts & Free Emoticons
  • Tangram App Lock
  • Direct Messenger
  • Private SMS
  • One Sentence Translator – Multifunctional Translator
  • Style Photo Collage
  • Meticulous Scanner
  • Desire Translate
  • Talent Photo Editor – Blur focus
  • Care Message
  • Part Message
  • Paper Doc Scanner
  • Blue Scanner
  • Hummingbird PDF Converter – Photo to PDF
  • All Good PDF Scanner

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...