ಹೈದ್ರಾಬಾದ್: ಗುಂಟೂರು ಜಿಲ್ಲೆಯ ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಜೆಸ್ಸಿ ಪ್ರಶಾಂತಿ ಅವರಿಗೆ ಸ್ವತಃ ಅವರ ತಂದೆ ಪಿಐ, ವೈ. ಶ್ಯಾಮಸುಂದರ್ ಸೆಲ್ಯೂಟ್ ಮಾಡುವ ಫೋಟೋವೊಂದು ವರ್ಷದ ಪ್ರಾರಂಭದಲ್ಲಿ ಭಾರಿ ಸುದ್ದಿಯಾಗಿತ್ತು. ಆ ಫೋಟೋದ ಹಿಂದೆ ಸ್ಪೂರ್ತಿದಾಯಕ ಕಥೆ ಇದೆ.
ಪ್ರಶಾಂತಿ ಅವರು, ಹ್ಯೂಮನ್ಸ್ ಆಫ್ ಬಾಂಬೆ ಎಂಬ ಬ್ಲಾಗ್ ಗೆ ನೀಡಿದ ಸಂದರ್ಶನದಲ್ಲಿ ತಾನು ಉನ್ನತ ಪೊಲೀಸ್ ಅಧಿಕಾರಿಯಾದ ಹಿಂದಿನ ಕಥೆಯನ್ನು ವಿವರಿಸಿದ್ದಾರೆ.
ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ 6 ತಿಂಗಳ ಜೈಲು
“ನಾನು ಚಿಕ್ಕವಳಿದ್ದಾಗ ಒಮ್ಮೆ ಅಪ್ಪನ ಜತೆ ಜೀಪ್ ನಲ್ಲಿ ರೌಂಡ್ಸ್ ಗೆ ತೆರಳಿದ್ದೆ. ಅಲ್ಲಿ ಎಲ್ಲರೂ ಅಪ್ಪನಿಗೆ ಸೆಲ್ಯೂಟ್ ಹೊಡೆಯುತ್ತಿದ್ದರು. ಅದನ್ನು ನೋಡಿ ನಾನೂ ಅವರಿಗೆ ಸೆಲ್ಯೂಟ್ ಹೊಡೆಯಲು ಪ್ರಾರಂಭಿಸಿದೆ. ಆದರೆ, ಸೆಲ್ಯೂಟ್ ನ ಹಿಂದೆ ಅವರ ಸವಾಲಿನ ಹಾಗೂ ಅಪಾಯಕಾರಿ ಕಾರ್ಯ ಅಡಗಿದೆ ಎಂಬುದು ನಾನು ದೊಡ್ಡವಳಾಗುತ್ತಿದ್ದಂತೆ ಗೊತ್ತಾಯಿತು.
ಹಲವು ರಿಮೋಟ್ ಪ್ರದೇಶಗಳಲ್ಲಿ ನನ್ನ ತಂದೆ ವೃತ್ತಿ ಮಾಡಿದ್ದರು. ಅದೆಷ್ಟೋ ನಿದ್ದೆಯಿಲ್ಲದ ರಾತ್ರಿ ಕಳೆದಿದ್ದರು. ನೂರಾರು ಬಾರಿ ಊಟ ಬಿಟ್ಟು ನಿರಂತರ ಕೆಲಸ ಮಾಡಿದ್ದರು. ಬೇರೆಯವರಿಗೆ ಒಳ್ಳೆಯದು ಮಾಡುವುದೇ ಅವರ ಉದ್ದೇಶವಾಗಿತ್ತು. ಅವರೇ ನನ್ನ ಹೀರೋ” ಎಂದು ಪ್ರಶಾಂತಿ ಹೇಳಿದ್ದಾರೆ.
https://www.facebook.com/humansofbombay/photos/p.1618080348400936/1618080348400936/?type=3
https://www.facebook.com/humansofbombay/photos/p.1618080441734260/1618080441734260/?type=3
https://www.facebook.com/humansofbombay/photos/a.253147214894263/1618079755067662/?type=3