ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರೊಬ್ಬರ ಮಗಳು ಪ್ರತಿಷ್ಠಿತ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಕಿರತ್‌ಪುರ ಗ್ರಾಮದ ಚಾರುಲ್ ಹೊನಾರಿಯಾ ಎಂಬ 18 ವರ್ಷದ ವಿದ್ಯಾರ್ಥಿನಿ ಈ ಸಾಧನೆಗೈದಿದ್ದಾಳೆ. ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಮನೆಯಿಂದಲೇ ಆನ್ಲೈನ್ ಕ್ಲಾಸ್‌ಗಳನ್ನು ಬಹಳ ಶ್ರದ್ಧೆಯಿಂದ ಅಟೆಂಡ್ ಮಾಡುತ್ತಿದ್ದ ಚಾರುಲ್, ತನ್ನ ಮನೆಯ ಟೆರೇಸ್ ಮೇಲೆ ಕುಳಿತು ಫೋನ್‌ನಲ್ಲಿ ಪಾಠ ಪ್ರವಚನ ಕೇಳುತ್ತಿದ್ದಳು.
ನೀಟ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 631ನೇ ರ‍್ಯಾಂಕ್ ಹಾಗೂ ಪರಿಶಿಷ್ಟ ಜಾತಿ ವರ್ಗದಲ್ಲಿ 10ನೇ ರ‍್ಯಾಂಕ್ ಪಡೆದಿರುವ ಚಾರುಲ್, 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ 93 ಪ್ರತಿಶತ ಅಂಕಗಳಿಸಿದ್ದಾರೆ.