ಸುದೀರ್ಘವಾದ ರೋಡ್ ಟ್ರಿಪ್ ಮಾಡುವುದು ಬಹುತೇಕ ಎಲ್ಲ ಯುವಜನರ ಕನಸು. ಆದರೆ ಈ ಕನಸನ್ನು ಸಾಕಾರ ಮಾಡಿಕೊಳ್ಳಲು ಇರುವ ಅಡೆತಡೆಗಳನ್ನು ಮೆಟ್ಟಿನಿಂತು ಮುಂದೆ ಬುರುವುದು ಮಾತ್ರ ಬೆರಳೆಣಿಕೆ ಮಂದಿ.
ತ್ರಿಶ್ಶೂರು ಮೂಲದ ಯುವ ದಂಪತಿಗಳಿಬ್ಬರು ಇಡೀ ದೇಶ ಸುತ್ತುವ ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ. ಹರಿಕೃಷ್ಣನ್ ಜೆ ಹಾಗೂ ಲಕ್ಷ್ಮಿ ಕೃಷ್ಣ ತಾವು ಮಾಡುತ್ತಿದ್ದ ಕೆಲಸಗಳನ್ನು ಬಿಟ್ಟು ರೋಡ್ ಟ್ರಿಪ್ ಮೂಲಕ ದೇಶ ಸುತ್ತಲು ಮುಂದಾಗಿದ್ದಾರೆ. ತಮ್ಮ ಕುಟುಂಬಗಳ ಬೆಂಬಲದಿಂದ ಇಬ್ಬರೂ ಕಾರೊಂದನ್ನು ಏರಿಕೊಂಡು ತಮ್ಮ ಕನಸು ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ.
ಕಾರಿನ ಹಿಂದಿನ ಸೀಟನ್ನು ರಾತ್ರಿ ವೇಳೆ ಮಲಗಲು ಅನುವಾಗುವಂತೆ ಮಡಚಲಾಗಿದ್ದು, ಹತ್ತು ಲೀಟರ್‌ಗಳ ನೀರಿನ ಕ್ಯಾನ್‌ಗಳನ್ನು ಜೊತೆಯಲ್ಲಿ ಒಯ್ದಿದ್ದಾರೆ ಈ ದಂಪತಿ. ಜೊತೆಯಲ್ಲಿ 5 ಕೆಜಿ ಗ್ಯಾಸ್ ಸಿಲಿಂಡರ್, ಬರ್ನರ್ ಸ್ಟವ್ ಹಾಗೂ ಅತ್ಯಗತ್ಯವಾದ ಕನಿಷ್ಠ ವಸ್ತುಗಳನ್ನೂ ಸಹ ಜೊತೆಗೆ ತೆಗೆದುಕೊಂಡಿರುವ ಈ ಜೋಡಿ, ತಮ್ಮ ಈ ಸಿದ್ಧತೆಗೆ 2.5 ಲಕ್ಷ ರೂ.ಗಳನ್ನು ವ್ಯಯಿಸಿದೆ.
ಆಟದಲ್ಲಿ ಸೋಲಿಸಿದ್ದಾನೆ ಎಂದು ಸ್ನೇಹಿತನನ್ನೇ ಕೊಂದ ಬಾಲಕ
ಅಕ್ಟೋಬರ್ 2020ರಲ್ಲಿ ಸಂಚಾರದ ಮೇಲಿದ್ದ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಿದ ಬಳಿಕ ಇವರ ಟ್ರಿಪ್ ತ್ರಿಶ್ಶೂರಿನಿಂದ ಆರಂಭಗೊಂಡಿದೆ. ಕರ್ನಾಟಕ, ಮಹಾರಾಷ್ಟ್ರದ ಅನೇಕ ನಗರಗಳನ್ನು ಹಾದು ಬಂದಿರುವ ಇವರು ಗುಜರಾತ್, ರಾಜಸ್ಥಾನ, ದೆಹಲಿಗಳನ್ನು ದಾಟಿ ಸದ್ಯ ಜಮ್ಮು & ಕಾಶ್ಮೀರದಲ್ಲಿ ಸುತ್ತಾಡುತ್ತಿದ್ದಾರೆ. ಇದುವರೆಗೂ ಇವರು 10,000 ಕಿಮೀ ಡ್ರೈವ್ ಮಾಡಿಕೊಂಡು ಬಂದಿದ್ದಾರೆ.
ಕಳೆದ 130 ದಿನಗಳಿಂದ ಸಂಚಾರದಲ್ಲಿರುವ ಈ ಜೋಡಿ, ದೇಶದ ಅನೇಕ ಪ್ರದೇಶಗಳ ನಾನಾ ರೀತಿಯ ಸ್ಥಳೀಯರನ್ನು ಭೇಟಿಯಾಗಿದ್ದಾರೆ.