ಅಂತಾರಾಷ್ಟ್ರೀಯ ಬಾಹ್ಯಾಕಾಶ ಒಲಿಂಪಿಯಾಡ್‌ನಲ್ಲಿ ಜಯಿಸಿರುವ ಪಂಜಾಬ್‌ನ ಅಮೃತಸರದ 16 ವರ್ಷದ ಹುಡುಗಿಯೊಬ್ಬಳಿಗೆ, ಅಮೆರಿಕದ ಜಾನ್ ಎಫ್ ಕೆನಡಿ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಲು ನಾಸಾ ಆಮಂತ್ರಣ ನೀಡಿದೆ.
ಅಮೃತಸರದ ಡೇವ್ ಪಬ್ಲಿಕ್ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ Hissaa, ಅಂತಾರಾಷ್ಟ್ರೀಯ ಬಾಹ್ಯಾಕಾಶ ಒಲಿಂಪಿಯಾಡ್‌ನ ಪ್ರಾಥಮಿಕ, ಮಧ್ಯಂತರ ಹಾಗೂ ಅಂತಿಮ ಸುತ್ತಿನ ಪರೀಕ್ಷೆಯಲ್ಲಿ ಒಟ್ಟಾರೆ 78.75 ಅಂಕಗಳನ್ನು ಗಳಿಸಿದ್ದಾಳೆ ಎಂದು ’ದಿ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ.
ಸ್ಫರ್ಧೆಯ ಸೀನಿಯರ್ ಕೆಟಗರಿಯಲ್ಲಿ ಈ ಸಾಧನೆಗೈದ ದೇಶದ ಮೊದಲ ವಿದ್ಯಾರ್ಥಿ ಎಂಬ ಶ್ರೇಯಕ್ಕೆ ಈ ಹುಡುಗಿ ಭಾಜನಳಾಗಿದ್ದಾಳೆ. ಯಾವುದೇ ಬಾಹ್ಯ ಕೋಚಿಂಗ್ ಇಲ್ಲದೇ ಬರೀ ಸತತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾಳೆ Hissaa. ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ತಜ್ಞೆಯಾಗಬೇಕೆಂಬ ಕನಸು ಕಾಣುತ್ತಿದ್ದಾಳೆ Hissaa.