ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ದೇಶದಲ್ಲಿ ಶಾಲಾ – ಕಾಲೇಜುಗಳನ್ನು ಮುಚ್ಚಲಾಗಿದೆ. ನಿಧಾನವಾಗಿ ಶಾಲೆಗಳನ್ನು ಶುರು ಮಾಡುವ ಆಲೋಚನೆಯಲ್ಲಿ ಸರ್ಕಾರವಿದೆ. ಇದಕ್ಕೆ ಯೋಜನೆಗಳನ್ನು ಸಿದ್ಧಪಡಿಸಲಾಗ್ತಿದೆ.
ಆದ್ರೆ ಉತ್ತರ ಪ್ರದೇಶದಲ್ಲಿ ಶಾಲೆಯೊಂದರ ಬಾಗಿಲು ತೆರೆದಿದೆ. ಜಲಾನ್ ಜಿಲ್ಲೆಯಲ್ಲಿ ಖಾಸಗಿ ಶಾಲೆ, ಸರ್ಕಾರದ ನಿಯಮಗಳನ್ನು ಕಡೆಗಣಿಸಿ ತರಗತಿ ಶುರುಮಾಡಿದೆ. ಆಗಸ್ಟ್ 31 ರವರೆಗೆ ಯಾವುದೇ ಶಾಲೆ – ಕಾಲೇಜುಗಳನ್ನು ತೆರೆಯದಿರಲು ಸರ್ಕಾರ ಸೂಚಿಸಿದೆ. ಆದ್ರೆ ಈ ಶಾಲೆಯಲ್ಲಿ ತರಗತಿ ಶುರುವಾಗಿದ್ದು, ಶಾಲೆ ವಿರುದ್ಧ ಕಠಿಣ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಪಶ್ಚಿಮ ಬಂಗಾಳದಲ್ಲೂ ಖಾಸಗಿ ಶಾಲೆಯೊಂದು ಬಾಗಿಲು ತೆರೆದಿತ್ತು. 10ನೇ ತರಗತಿ ಮಕ್ಕಳಿಗೆ ಪಾಠ ಹೇಳಲಾಗ್ತಿತ್ತು. ಆ ಶಾಲೆ ವಿರುದ್ಧವೂ ಕ್ರಮಕೈಗೊಳ್ಳಲಾಗಿದೆ.