ಕೊರೊನಾದ ಎರಡನೇ ಅಲೆಯ ಮಧ್ಯೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ಕೊರೊನಾದ ಎರಡನೇ ಅಲೆ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಎರಡನೇ ಅಲೆ ವಿರುದ್ಧ ಹೊರಾಡಲು ದೊಡ್ಡ ಹೆಜ್ಜೆ ಅಗತ್ಯವಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.
ತುರ್ತು ಆರೋಗ್ಯ ಸೇವೆಗಳಿಗಾಗಿ ಆರ್‌ಬಿಐ 50,000 ಕೋಟಿ ರೂಪಾಯಿ ನೀಡಿದೆ. ತುರ್ತು ಆರೋಗ್ಯ ಸೇವೆಗಳಿಗೆ 50,000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗುವುದು ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ. ಬ್ಯಾಂಕ್ ಗಳು ಲಸಿಕೆ ತಯಾರಕರು, ಲಸಿಕೆ ಸಾಗಣೆ, ರಫ್ತುದಾರರಿಗೆ ಸುಲಭ ಕಂತುಗಳಲ್ಲಿ ಸಾಲವನ್ನು ನೀಡುತ್ತವೆ. ಆಸ್ಪತ್ರೆಗಳು, ಆರೋಗ್ಯ ಸೇವಾ ಪೂರೈಕೆದಾರರು ಇದರ ಲಾಭ ಪಡೆಯಲಿದ್ದಾರೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಚಿಲ್ಲರೆ ಮತ್ತು ಸಣ್ಣ ಉದ್ಯಮಿಗಳಿಗೆ ಆರ್‌ಬಿಐ ಗವರ್ನರ್ ದೊಡ್ಡ ಪರಿಹಾರ ನೀಡಿದ್ದಾರೆ. ಇದರೊಂದಿಗೆ ಇನ್ನೂ ಕೆಲವು ಪರಿಹಾರಗಳನ್ನು ಸಹ ಘೋಷಿಸಲಾಗಿದೆ. ಆದ್ಯತೆಯ ಕ್ಷೇತ್ರಕ್ಕೆ ಸಾಲ ಮತ್ತು ಪ್ರೋತ್ಸಾಹ ಧನ ಶೀಘ್ರದಲ್ಲೇ ನೀಡಲಾಗುವುದು ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್: 2 ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ
ಕೊರೊನಾದ ಮೊದಲ ಅಲೆ ನಂತರ ಆರ್ಥಿಕತೆಯಲ್ಲಿ ಚೇತರಿಕೆ ಕಂಡುಬಂದಿತ್ತು. ಆದರೆ ಎರಡನೇ ಅಲೆ ಮತ್ತೊಮ್ಮೆ ಬಿಕ್ಕಟ್ಟನ್ನು ಸೃಷ್ಟಿಸಿದೆ. ಸರ್ಕಾರ ಲಸಿಕೆ ಚುರುಕುಗೊಳಿಸುತ್ತಿದೆ. ಜಾಗತಿಕ ಆರ್ಥಿಕತೆಯಲ್ಲಿ ಚೇತರಿಕೆಯ ಲಕ್ಷಣಗಳಿವೆ ಎಂದು ಅವರು ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗದ ಎರಡನೇ ಅಲೆ ತಡೆಗಟ್ಟಲು ಅನೇಕ ರಾಜ್ಯಗಳಲ್ಲಿ ಲಾಕ್‌ಡೌನ್ ಮತ್ತು ಇತರ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದು ಆರ್ಥಿಕತೆಗೆ ಹಾನಿಯನ್ನುಂಟು ಮಾಡುತ್ತದೆ. ಆದರೆ ಆರ್‌ಬಿಐ ಪರಿಸ್ಥಿತಿಯ ಮೇಲೆ ಕಣ್ಣಿಟ್ಟಿದೆ ಎಂದವರು ಹೇಳಿದ್ದಾರೆ.
ಗವರ್ನರ್ ಶಕ್ತಿಕಾಂತ ದಾಸ್ ತಮ್ಮ ಭಾಷಣದಲ್ಲಿ ಪ್ರಸ್ತುತ ಪರಿಸ್ಥಿತಿಯಲ್ಲಿ ಕೆವೈಸಿ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಇದರ ಅಡಿಯಲ್ಲಿ, ವೀಡಿಯೊ ಮೂಲಕ ಕೆವೈಸಿಗೆ ಅನುಮೋದನೆ ನೀಡಲಾಗಿದೆ ಎಂದವರು ಹೇಳಿದ್ದಾರೆ.