ಮುಂಬೈ: ಖ್ಯಾತ ಉದ್ಯಮಿ ರತನ್ ಟಾಟಾ ತಮ್ಮ ಔದ್ಯಮಿಕ ಕೌಶಲದಿಂದ ಮಾತ್ರವಲ್ಲ ಪರೋಪಕಾರಿ ಕೆಲಸಗಳಿಂದಲೂ ಪ್ರಸಿದ್ಧರು. ಇತ್ತೀಚೆಗೆ ಜಾಲತಾಣದಲ್ಲಿ ಅವರು ಹಾಕಿದ ಒಂದು ಪೋಸ್ಟ್ ಟಾಟಾ ಅವರ ಉದಾರ ಮನಸ್ಸಿಗೆ ಒಂದು ಸಾಕ್ಷಿಯಾಗಿದೆ.
ರತನ್ ಟಾಟಾ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಫ್ಲಾಟ್ ಫಾರ್ಮ್ ಮೇಲೆ ಮಾಸ್ಕ್ ಹಾಕಿ ಕುಳಿತು ಕೆಲ ಸಾಮಾನ್ಯ ಬೀದಿ ನಾಯಿಗಳಿಗೆ ಆಹಾರ ತಿನ್ನಿಸುತ್ತಿದ್ದಾರೆ.
“ಬಾಂಬೆ ಹೌಸ್ ನ ದತ್ತು ನಾಯಿಗಳ ಜತೆ ಈ ದೀಪಾವಳಿ ಸಮಯದಲ್ಲಿ ಹೃದಯ ಸ್ಪರ್ಷಿ ಕ್ಷಣಗಳು…..ವಿಶೇಷವಾಗಿ ಗೋವಾ ಜತೆ” ಎಂದು ರತನ್ ಅವರು ತಮ್ಮ ಫೋಟೋಕ್ಕೆ ಕ್ಯಾಪ್ಶನ್ ನೀಡಿದ್ದಾರೆ.
ಟಾಟಾ ಗ್ರೂಪ್ ಕಂಪನಿಗಳ ನಿವೃತ್ತ ಅಧ್ಯಕ್ಷರಾಗಿರುವ 82 ವರ್ಷದ ರತನ್ ಅವರ ಪೋಸ್ಟ್ ನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. “ಜೀವಂತ ದಂತಕಥೆ” ಎಂದು ಒಬ್ಬರು, “ಪರಿಶುದ್ಧ ಆತ್ಮ” ಎಂದು ಇನ್ನೊಬ್ಬರು, “ಬಂಗಾರದ ಹೃದಯದ ಮನುಷ್ಯ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.