ರಸ್ತೆಯ ತಪ್ಪು ಬದಿಯಲ್ಲಿ ವಾಹನ ಚಾಲನೆ ಮಾಡುವ ಸವಾರರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂಬೈ ಪೊಲೀಸರು ಮುಂದಾಗಿದ್ದಾರೆ.
ಜನವರಿ 4ದಿಂದ ಜಾರಿಗೆ ಬಂದಿರುವ ಹೊಸ ನಿಯಮಾವಳಿಗಳ ಅಡಿಯಲ್ಲಿ, ಮಿತಿ ಮೀರಿದ ವೇಗದಲ್ಲಿ ವಾಹನ ಚಾಲನೆ, ರ‍್ಯಾಶ್ ಡ್ರೈವಿಂಗ್, ತಪ್ಪು ಬದಿಯಲ್ಲಿ ವಾಹನ ಚಾಲನೆ ಸೇರಿದಂತೆ ಸಂಚಾರಿ ನಿಯಮಗಳ ಗಂಭೀರ ಉಲ್ಲಂಘನೆ ಮಾಡುವ ಮಂದಿಗೆ ಆರು ತಿಂಗಳವರೆಗೂ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಪೊಲೀಸರಿಂದ ಭರ್ಜರಿ ಬೇಟೆ: ಜೈಷ್ ಸಂಘಟನೆಯ ಇಬ್ಬರು ಉಗ್ರರು ಅರೆಸ್ಟ್
ಅದಾಗಲೇ ಕಾರ್ಯಪ್ರವೃತ್ತರಾಗಿರುವ ಮುಂಬೈ ಪೊಲೀಸರು 155 ಸವಾರರ ಮೇಲೆ ಕ್ರಮ ಜರುಗಿಸಿದ್ದು, ಐಪಿಸಿಯ 279ನೇ ವಿಧಿ ಅಡಿ ಆರೋಪಪಟ್ಟಿ ಸಿದ್ಧಪಡಿಸಿದ್ದಾರೆ. ಹಳೆ ಉಲ್ಲಂಘನೆಗಳಿಗೆ ಪಾವತಿ ಮಾಡಬೇಕಿದ್ದ ದಂಡ ಬಾಕಿ ಉಳಿಸಿಕೊಂಡಿರುವ 4,200 ಮಂದಿ ಸವಾರರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಆರ್‌ಟಿಓ ಕಾರ್ಯಾಲಯಕ್ಕೆ ಶೋ-ಕಾಸ್ ನೋಟೀಸ್ ಕಳುಹಿಸಿದ್ದು, ಅವರೆಲ್ಲರ ಪರವಾನಿಗೆ ರದ್ದು ಮಾಡುವ ವಾರ್ನಿಂಗ್ ಕೊಡಲು ಸೂಚಿಸಿದೆ.