ಇತ್ತೀಚೆಗಷ್ಟೇ ಹಳದಿ ಬಣ್ಣಕ್ಕೆ ತಿರುಗಿದ ಕಪ್ಪೆಗಳನ್ನು ಕಂಡಿದ್ದೆವು. ಬಿಳಿಯ ಕಾಗೆ, ಕಪ್ಪು ಚಿರತೆ ಹೀಗೆ ಅಪರೂಪದ ಪ್ರಾಣಿ, ಪಕ್ಷಿಗಳ ಬಗ್ಗೆ ಕಂಡು ಕೇಳರಿತಿದ್ದೇವೆ.
ಇದೀಗ ಆಮೆಯ ಸರದಿ. ಹೌದು, ಒಡಿಶಾದ ಬಾಲಾಸೋರ್ ನಲ್ಲಿ ಹಳದಿ ಬಣ್ಣದ ಅತ್ಯಪರೂಪದ ಆಮೆ ಪತ್ತೆಯಾಗಿದೆ.
ಐಎಫ್ಎಸ್ ಅಧಿಕಾರಿ ಸುಸಾಂತ ನಂದಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಬಾಲಾಸೋರ್ ನಲ್ಲಿ ಕಂಡ ಈ ಆಮೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಅಕ್ವೇರಿಯಮ್ ನಲ್ಲಿ ಸ್ವಚ್ಛಂದವಾಗಿ ಈಜಾಡುತ್ತಿರುವ ಹಳದಿ ಆಮೆಯ ವಿಡಿಯೋ ವೈರಲ್ ಆಗಿದೆ.
ಮನುಷ್ಯರಲ್ಲಿ ಕಾಣಿಸಿಕೊಳ್ಳುವ ತೊನ್ನಿನಂತಹ ಕಾಯಿಲೆ ಆಮೆಗೂ ಇರುವುದರಿಂದ ಹಳದಿ ಬಣ್ಣದಿಂದ ಕೂಡಿದೆ. ಕಣ್ಣುಗಳು ಗುಲಾಬಿ ಬಣ್ಣಕ್ಕೆ ತಿರುಗಿವೆ. ಇವೆಲ್ಲವೂ ತೊನ್ನಿನ ಲಕ್ಷಣಗಳು ಎಂದು ಅಂದಾಜಿಸಲಾಗಿದೆ.