ಗುರುಗ್ರಾಮ: ಮಾರಿಷಸ್ ನ 48 ವರ್ಷ ಮಹಿಳೆಯ ಪ್ಯಾನ್ಕ್ರಿಯಾಟಿಕ್ ಟೇಲ್ ನಲ್ಲಿ ಬೆಳೆದಿದ್ದ ಗಡ್ಡೆಯನ್ನು ರೋಬೊಟ್ ಮೂಲಕ ಶಸ್ತ್ರಚಿಕಿತ್ಸೆ ಮಾಡಿ ತೆಗೆಯುವಲ್ಲಿ ನವದೆಹಲಿ ಎನ್.ಸಿ.ಆರ್. ವೈದ್ಯರು ಯಶಸ್ವಿಯಾಗಿದ್ದಾರೆ.
ಮೇದೋಜೀರಕ ಗ್ರಂಥಿಯಲ್ಲಿದ್ದ 4 ಸೆಂಟೀಮೀಟರ್ ದೊಡ್ಡ ಗಡ್ಡೆಯನ್ನು ರೊಬೊಟಿಕ್ ಡಿಸ್ಟಾಲ್ ಪೆನ್ಕ್ರಿಯಾಕ್ಟಮಿ ವಿತ್ ಸ್ಪೆಲೆನೆಕ್ಟಮಿ ಮೂಲಕ ತೆಗೆಯಲಾಯಿತು.
ಪೋರ್ಟೀಸ್ ಮೆಮೋರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನಿಂದ ಮಹಿಳೆಯ ಸಂಪೂರ್ಣ ದೇಹದ ಪಿಇಟಿ ಸಿಟಿ ಸ್ಕ್ಯಾನ್ ಮಾಡಲಾಗಿತ್ತು. ಆಗ ಆಕೆಯ ದೇಹದಲ್ಲಿ ಗಡ್ಡೆ ಇರುವುದು ಖಚಿತವಾಗಿತ್ತು. ಪೆನ್ಕ್ರಿಯಾಟಿಕ್ ಟೇಲ್ ಟ್ಯೂಮರ್ ಶಸ್ತ್ರ ಚಿಕಿತ್ಸೆ ಅತ್ಯಂತ ಸಂಕೀರ್ಣವಾಗಿದೆ ಎಂದು ಡಾ.ನಿರಂಜನ ಹೇಳಿದ್ದಾರೆ.