ಅಪರೂಪದ ಭಾರಿ ಗಾತ್ರದ ಮೀನು ಪಶ್ಚಿಮ ಬಂಗಾಳದ ಮೀನುಗಾರರ ಬಲೆಗೆ ಬಿದ್ದಿದ್ದು, ಭಾರಿ ಲಾಭವನ್ನುಂಟು ಮಾಡಿದೆ.
780 ಕೆಜಿ ಭಾರದ ಚಿಲ್ ಶಾರ್ಕ್ ಮೀನು ಇದಾಗಿದ್ದು, ಪಶ್ಚಿಮ ಬಂಗಾಳದ ಡಿಗಾ ಟ್ರಾಲರ್ ಬೋಟ್ ಒಂದರ ಬಲೆಗೆ ಬಿದ್ದಿದೆ. ಅಳಿವಿನ ಅಂಚಿನಲ್ಲಿರುವ ವರ್ಗಕ್ಕೆ ಸೇರಿದ ಈ ಮೀನು ಬಲೆಗೆ ಬಿದ್ದ ಸುದ್ದಿ ಕೇಳಿ ನೂರಾರು ಜನ ನೋಡಲು ಸೇರಿದ್ದರು.
ಹರಸಾಹಸ ಪಟ್ಟು ಮೀನುಗಾರರು ಅದನ್ನು ಮಾರುಕಟ್ಟೆಗೆ ಕೊಂಡೊಯ್ದಿದ್ದು, ಪ್ರತಿ ಕೆಜಿಗೆ 2100 ರೂ. ಬೆಲೆಯಲ್ಲಿ ಮೀನು ಮಾರಾಟವಾಗಿದೆ. ಅಂದರೆ ಸುಮಾರು 16 ಲಕ್ಷ ರೂ. ಬೆಲೆ ಬಂದಿದೆ ಎಂದು ಮೀನುಗಾರ ಸಂಘಟನೆಯ ಮುಖಂಡ ಮೋಹನ್ ತಿಳಿಸಿದ್ದಾರೆ. ಲಾಕ್ ಡೌನ್ ಸಮುದಲ್ಲಿ ಮೀನುಗಾರರಿಗೆ ಲಾಟರಿ ಹೊಡೆದಂತಾಗಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.