ನಾಡಿಯಾಡ್‌ನ ವಿಶೇಷ ಪೊಕ್ಸೊ ನ್ಯಾಯಾಲಯ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಬಂಧಿಯಾಗಿದ್ದ ವ್ಯಕ್ತಿಯನ್ನು ಬಿಡುಗಡೆ ಮಾಡಿದೆ. ಅಪ್ರಾಪ್ತೆಗೆ ಜನಿಸಿದ ಮಗುವಿನ ಡಿಎನ್ಎ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಮಗು ಆತನದಲ್ಲ ಎಂಬ ಸಂಗತಿ ಗೊತ್ತಾಗಿದೆ.
ಮಹಿಳೆಯೊಬ್ಬಳು 24 ವರ್ಷದ ಸೋಲಂಕಿ ವಿರುದ್ಧ ಮಗಳ ಮೇಲೆ ಅತ್ಯಾಚಾರವೆಸಗಿದ ಆರೋಪ ಹೊರಿಸಿದ್ದಳು. 15 ವರ್ಷದ ಮಗುವಿನ ಮೇಲೆ ಸೋಲಂಕಿ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದಳು. ಸೋಲಂಕಿಯಿಂದ ಮಗಳು ಗರ್ಭ ಧರಿಸಿದ್ದು, 2020ರಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಳು ಎಂದು ಮಹಿಳೆ ದೂರಿದ್ದಳು. ಆದ್ರೆ ಮಗು ಜನಿಸಿದ ಒಂದು ವರ್ಷದ ನಂತ್ರ 2021ರಲ್ಲಿ ಮಹಿಳೆ ದೂರು ನೀಡಿದ್ದಳು. ಜನರ ಭಯಕ್ಕೆ ಹೆದರಿ ಒಂದು ವರ್ಷ ಕಾದಿರುವುದಾಗಿ ಆಕೆ ಹೇಳಿದ್ದಳು.
ಆದ್ರೆ ಸತತ ಆರು ತಿಂಗಳುಗಳ ಕಾಲ ನಡೆದ ವಿಚಾರಣೆಯಲ್ಲಿ ಸೋಲಂಕಿ ವಿರುದ್ಧ ಯಾವುದೇ ಸಾಕ್ಷಿ ಸಿಗದೆ. ತಾಯಿ ಒತ್ತಾಯಕ್ಕೆ ದೂರು ನೀಡಿದ್ದಾಗಿ ಮಗಳು ಹೇಳಿದ್ದಳು. ಕೊನೆಯದಾಗಿ ಡಿಎನ್ಎ ಪರೀಕ್ಷೆ ಮಾಡಲಾಯ್ತು. ಆದ್ರೆ ಮಗು ಸೋಲಂಕಿಯದಲ್ಲ ಎಂಬ ಸಂಗತಿ ಗೊತ್ತಾಗ್ತಿದ್ದಂತೆ ಆತನನ್ನು ಬಿಡುಗಡೆ ಮಾಡಲಾಗಿದೆ.