ಇದು ರನೇಹ್ ಎಂಬ ಹೆಸರಿನ ಜಲಪಾತ. ಮಧ್ಯಪ್ರದೇಶದ ಖುಜರಾಹೋ ಬಳಿ ಇದೆ. ದೇಶದ ಅತ್ಯುತ್ತಮ ಜಲಪಾತವೆಂಬ ಹೆಗ್ಗಳಿಕೆ ಈ ಜಲಪಾತಕ್ಕಿದೆ.
ಖುಜರಾಹೋ ಒಂದು ಐತಿಹಾಸಿಕ ತಾಣ. ಅಲ್ಲಿ ಮಾನವರೇ ನಿರ್ಮಿಸಿರುವ ಅತ್ಯದ್ಭುತ ಶಿಲ್ಪಗಳಿವೆ. ಅಲ್ಲಿಂದ ಕೇವಲ 20 ಕಿಮೀ ದೂರದಲ್ಲಿ ಈ ಜಲಪಾತವಿದೆ. ಕೆನ್ ನದಿಯಿಂದ ನಿರ್ಮಾಣವಾಗಿರುವ ಜಲಪಾತ ಇದು. ಶುದ್ಧ ಸ್ಫಟಿಕದ ಗ್ರಾನೈಟ್ ಗಳು ಇಲ್ಲಿನ ವಿಶೇಷತೆ. ಒಂದು ದೊಡ್ಡ ಝರಿ ಹಾಗೂ ಒಂದು ಸಣ್ಣ ಝರಿ ವರ್ಷಪೂರ್ತಿ ಹರಿಯುತ್ತಲೇ ಇರುತ್ತದೆ.
ಉಳಿದ ಜಲಪಾತಗಳು ಮಳೆಗಾಲದಲ್ಲಿ ಮಾತ್ರ ಧುಮ್ಮಿಕ್ಕಿ ಹರಿಯುತ್ತವೆ. ಹತ್ತಿರದಲ್ಲೇ ಪಾಂಡವ ಜಲಪಾತ ಹಾಗೂ ಪನ್ನಾ ರಾಷ್ಟ್ರೀಯ ಉದ್ಯಾನವನವೂ ಇದೆ. ರನೇಹ್ ಜಲಪಾತದಲ್ಲಿರುವ ಬಣ್ಣಬಣ್ಣದ ಸ್ಫಟಿಕದ ಕಲ್ಲುಗಳೇ ಪ್ರಮುಖ ಆಕರ್ಷಣೆ. ಅದನ್ನು ನೋಡಲೆಂದೇ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರ್ತಾರೆ.