ಜಾರ್ಖಂಡ್ನ ರಾಜಧಾನಿ ರಾಂಚಿಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬ ತನ್ನ ಅಪ್ರಾಪ್ತ ಗೆಳತಿಯನ್ನು ಓಡಿಸಿಕೊಂಡು ಹೋಗಲು ಬಂದಿದ್ದ. ಆದರೆ ಮಗಳ ಬದಲು ತಾಯಿಯನ್ನು ಕರೆದೊಯ್ದಿದ್ದಾನೆ. ಘಟನೆ ನಂತ್ರ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಆರೋಪಿ ಚಂದನ್ ಮತ್ತು ಕಾರು ಚಾಲಕ ರಂಜನ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಬಿಹಾರ ನಳಂದ ಜಿಲ್ಲೆಯ ಚಂದನ್ ಜಾರ್ಖಂಡ್ ರಾಜಧಾನಿ ರಾಂಚಿಯ ಗ್ರಾಮವೊಂದರ ಹುಡುಗಿಯನ್ನು ಪ್ರೀತಿಸಿದ್ದ. ಆಕೆಯನ್ನು ಕರೆದೊಯ್ಯಲು ಪ್ಲಾನ್ ಮಾಡಿ ಬಂದಿದ್ದ. ಪ್ಲಾನ್ ರೀತಿಯಲ್ಲೇ ಹುಡುಗಿ ಮನೆಗೆ ಬಂದಿದ್ದಾನೆ. ಅಪ್ರಾಪ್ತೆ ಕಾರ್ ಕೂಡ ಹತ್ತಿದ್ದಾಳೆ. ಆದ್ರೆ ಈ ವಿಷ್ಯ ಹುಡುಗಿ ತಾಯಿಗೆ ಗೊತ್ತಾಗಿದೆ.
ಹುಡುಗಿ ತಾಯಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಗಲಾಟೆ ಶುರು ಮಾಡಿದ್ದಾಳೆ. ತಕ್ಷಣ ಚಂದನ್, ಕಾರು ಚಾಲಕನ ಸಹಾಯ ಪಡೆದು ಹುಡುಗಿ ತಾಯಿಯನ್ನೂ ಕಾರಿಗೆ ಏರಿಸಿದ್ದಾನೆ. ಹುಡುಗಿ ಜೊತೆ ಹುಡುಗಿ ತಾಯಿಯನ್ನೂ ಕಾರಿನಲ್ಲಿ ಕರೆದೊಯ್ದ ಯುವಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.