
ಹರಿದ್ವಾರ: ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಯೋಗ ಪೀಠ ಸಂಶೋಧನಾ ಸಂಸ್ಥೆ ಕೊರೋನಾ ನಿಯಂತ್ರಣಕ್ಕೆ ಶೇಕಡ 100 ರಷ್ಟು ಪರಿಣಾಮಕಾರಿ ಔಷಧ ಬಿಡುಗಡೆ ಮಾಡಿದೆ.
ಯೋಗಗುರು ಬಾಬಾ ರಾಮದೇವ್ ಪತ್ರಿಕಾಗೋಷ್ಠಿಯಲ್ಲಿ ಪತಂಜಲಿ ಸಂಸ್ಥೆ ಅಭಿವೃದ್ಧಿ ಪಡಿಸಿದ ಆಯುರ್ವೇದ ವಿಜಯ ಕೋರೋನಿಲ್ ಶ್ವಾಸರಿ ಎಂಬ ಔಷಧಗಳನ್ನು ಬಿಡುಗಡೆ ಮಾಡಿದ್ದು ಕೊರೊನಾ ಸೋಂಕಿತರ ಮೇಲೆ ಶೇಕಡ 100ರಷ್ಟು ಸಕಾರಾತ್ಮಕ ಫಲಿತಾಂಶವನ್ನು ನೀಡಿದೆ ಎಂದು ತಿಳಿಸಿದ್ದಾರೆ.
ದೆಹಲಿ, ಅಹಮದಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಕ್ಲಿನಿಕಲ್ ಆಧಾರಿತ ಅಧ್ಯಯನ ನಡೆಸಲಾಗಿದ್ದು 280 ರೋಗಿಗಳು ಶೇಕಡ 100ರಷ್ಟು ಗುಣಮುಖರಾಗಿದ್ದಾರೆ. ಈ ಔಷಧದ ಮೂಲಕ ಕೊರೋನಾ ನಿಯಂತ್ರಿಸಬಹುದು ಎಂದು ರಾಮದೇವ್ ಮಾಹಿತಿ ನೀಡಿದ್ದಾರೆ.
ಪತಂಜಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಚಾರ್ಯ ಬಾಲಕೃಷ್ಣ, 545 ರೂ.ಗೆ 30 ದಿನ ಬಳಸಬಹುದಾದ ದಿವ್ಯ ಕೊರೋನಾ ಕಿಟ್ ಸಿದ್ಧಪಡಿಸಲಾಗಿದೆ. ಇನ್ನೊಂದು ವಾರದಲ್ಲಿ ಪತಂಜಲಿ ಮಳಿಗೆಗಳಲ್ಲಿ ಲಭ್ಯವಿರುತ್ತದೆ ಎಂದು ಹೇಳಿದ್ದಾರೆ.