ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯದ ಕ್ಷಣಗಣನೆ ಆರಂಭಗೊಂಡಿದೆ. ಆಗಸ್ಟ್ 5ರಂದು ಶ್ರೀರಾಮಚಂದ್ರರ ರಾಜಧಾನಿಯಲ್ಲಿ ಭವ್ಯ ಸಮಾರಂಭಕ್ಕೆ ಅದಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಈ ಸುಸಂದರ್ಭದಲ್ಲಿ ಪಟನಾದ ಮಹಾವೀರ ಮಂದಿರ ಟ್ರಸ್ಟ್ ವತಿಯಿಂದ ಸಿಹಿ ವಿತರಣೆ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ. ಒಟ್ಟಾರೆ 1.25 ಲಕ್ಷ ಲಡ್ಡುಗಳನ್ನು ತಯಾರಿಸಲಾಗಿದ್ದು, ಇವುಗಳ ಪೈಕಿ 51 ಸಾವಿರ ಲಡ್ಡುಗಳನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಗೆ ನೀಡಲಾಗಿದೆ. ಮಿಕ್ಕ ಲಡ್ಡುಗಳನ್ನು ಜಾನಕಿಯ ಜನ್ಮಸ್ಥಳವಾದ ಬಿಹಾರದ ಸೀತಾಮಾರ್ಹಿಗೆ ಕಳುಹಿಸಿಕೊಡಲಾಗಿದೆ.