ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯುತ್ತಿದ್ದರೆ ಪುರಿಯ ಬೀಚ್ ನಲ್ಲಿ ರಾಮಮಂದಿರ ಅರಳಿ ನಿಂತಿತ್ತು. ಅದೇಗೆ ಅಂತಿರಾ?
ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಅಯೋಧ್ಯೆಯಲ್ಲಿ ಭೂಮಿ ಪೂಜನ ಸಮಾರಂಭದ ಮುನ್ನಾ ದಿನದಂದು ಒಡಿಶಾದ ಪುರಿ ಬೀಚ್‌ನಲ್ಲಿ ರಾಮ ಮಂದಿರ ಹೋಲುವಂತೆ ಮರಳಿನಲ್ಲಿ ಪ್ರತಿಕೃತಿಯನ್ನು ರಚಿಸಿದ್ದರು.
ಭೂಮಿ ಪೂಜೆಯ ಸಮಯದಲ್ಲಿ ಅಯೋಧ್ಯೆಯಲ್ಲೇ ದೇವಾಲಯದ ಮರಳು ಶಿಲ್ಪವನ್ನು ರಚಿಸಲು ಅವರು ಉತ್ಸುಕರಾಗಿದ್ದರು, ಆದರೆ ಕೋವಿಡ್ ಕಾರಣಕ್ಕೆ ಪುರಿ ಬೀಚ್‌ನಲ್ಲಿ ಇದನ್ನು ಮಾಡಬೇಕಾಯಿತು ಎಂದು ಪಟ್ನಾಯಕ್ ಹೇಳಿದ್ದಾರೆ. ನಾನು ಕಳೆದ ವರ್ಷ ಅಯೋಧ್ಯೆಗೆ ಭೇಟಿ ನೀಡಿದ್ದೇನೆ ಮತ್ತು ಈ ಉದ್ದೇಶಕ್ಕಾಗಿ ಅಧ್ಯಯನ ನಡೆಸಿದ್ದೇನೆ. ಆದಾಗ್ಯೂ, ನನ್ನ ಪ್ಲಾನ್ ಬದಲಾಯಿಸಬೇಕಾಯಿತು ಎಂದು ಅವರು ವಿವರಿಸಿದ್ದಾರೆ.
ಪಟ್ನಾಯಕ್ ಬೀಚ್‌ನಲ್ಲಿ ರಚಿಸಿದ ತಮ್ಮ ಮರಳು ಶಿಲ್ಪದ ಚಿತ್ರಗಳನ್ನು ಮತ್ತು ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ʼಜೈ ಶ್ರೀರಾಮ್……ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರಿಂದ ರಾಮಮಂದಿರ ಅಯೋಧ್ಯೆಗೆ ಅಡಿಪಾಯ ಹಾಕುವ ಸಮಾರಂಭದ ಶುಭ ದಿನದಂದು ಒಡಿಶಾದ ಪುರಿ ಬೀಚ್‌ನಲ್ಲಿ ನನ್ನ ಸ್ಯಾಂಡ್ ಆರ್ಟ್ʼ ಎಂಬ ಶೀರ್ಷಿಕೆಯನ್ನೂ ನೀಡಿದ್ದಾರೆ.