ಉತ್ತರ ಪ್ರದೇಶದಲ್ಲಿ ತಾಪಮಾನ ಕಡಿಮೆಯಾಗುತ್ತಿರುವ ಹಿನ್ನೆಲೆ ಶ್ರೀರಾಮ ಹಾಗೂ ಸಹೋದರರ ವಿಗ್ರಹಗಳಿಗೆ ಕಂಬಳಿಯಿಂದ ಹೊದಿಸಲಾಗಿದೆ. ಇದರ ಜೊತೆಯಲ್ಲಿ ವಿಗ್ರಹಗಳನ್ನ ಬೆಚ್ಚಗೆ ಇಡಲು ಹೀಟರ್ಗಳನ್ನೂ ಅಳವಡಿಸಲಾಗಿದೆ.
1992ರಲ್ಲಿ ಬಾಬರಿ ಮಸೀದಿ ನೆಲಸಮವಾದ ಬಳಿಕ ಇದು ಎರಡನೇ ಬಾರಿಗೆ ವಿಗ್ರಹಗಳಿಗೆ ಈ ರೀತಿ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ ಸ್ಥಳೀಯ ಹಿಂದೂ ಮುಖಂಡರು ಹಾಗೂ ವಿಶ್ವ ಹಿಂದೂ ಪರಿಷತ್ ಸದಸ್ಯರು ಅಯೋಧ್ಯೆ ಆಯುಕ್ತರಿಗೆ ಮನವಿ ಸಲ್ಲಿಸಿದ ಬಳಿಕ ಇದೇ ರೀತಿಯ ವ್ಯವಸ್ಥೆ ಮಾಡಲಾಗಿತ್ತು.
ದೇಗುಲದಲ್ಲಿ ತಾಪಮಾನ ಈಗ ನಿಯಂತ್ರಣದಲ್ಲಿದೆ. ನಮ್ಮ ದೇವತೆಗಳಿಗೆ ಈ ಶೀತದಲ್ಲಿ ಯಾವುದೇ ತೊಂದರೆಯಾಗದಂತೆ ಬ್ಲೋವರ್ ಹೀಟರ್ ಸ್ಥಾಪಿಸಿದ್ದೇವೆ. ಇದಲ್ಲದೇ ದೇವತೆಗಳನ್ನ ಬೆಚ್ಚಗಿನ ಬಟ್ಟೆಯಲ್ಲಿ ಇಡಲಾಗಿದೆ. ಮೊದಲು ನಾವು ಅಗ್ಗಿಸ್ಟಿಕೆಯನ್ನ ಇಡಲು ಯೋಚನೆ ಮಾಡಿದ್ವಿ. ಆದರೆ ದೇವಾಲಯ ಗಾಜು ಹಾಗೂ ಮರದಿಂದ ನಿರ್ಮಾಣವಾಗಿರೋದ್ರಿಂದ ಅದು ಸುರಕ್ಷಿತವಲ್ಲ ಎಂದೆನಿಸಿತು. ಹೀಗಾಗಿ ಈ ವ್ಯವಸ್ಥೆ ಮಾಡಿದ್ದೇವೆ ಎಂದು ದೇವಾಲಯದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಮಾಹಿತಿ ನೀಡಿದ್ರು.