ಮರಳಿನಲ್ಲಿ ಚಮತ್ಕಾರ ಸೃಷ್ಟಿಸುವ ಕಲಾವಿದ ಸುದರ್ಶನ ಪಟ್ನಾಯಕ್ ಇದೀಗ ಮತ್ತೊಂದು ಅದ್ಭುತ ಕಲೆಯನ್ನು ಕೊರೊನಾ ವಾರಿಯರ್ ಗೆಂದು ಸೃಷ್ಟಿ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಪಟ್ನಾಯಕ್ ಅವರು ಈ ಕಲೆಯನ್ನು ರಚಿಸಿದ್ದಾರೆ. ಈ ಬಾರಿಯ ರಕ್ಷಾ ಬಂಧನವನ್ನು ಕೊರೊನಾದಿಂದ ರಕ್ಷಿಸಲು ಹಗಲಿರುವ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್‌ಗೆ ಮೀಸಲಿಟ್ಟದ್ದಾರೆ. ಈ ಮರಳು ಕಲೆಯನ್ನು ಒಡಿಸ್ಸಾದ ಪುರಿ ಬೀಚ್‌ನಲ್ಲಿ ರಚಿಸಿದ್ದು, ಮರಳಿನಲ್ಲಿ ವೈದ್ಯರು, ದಾದಿಯರು, ಪೊಲೀಸ್, ಪತ್ರಕರ್ತರು ಹಾಗೂ ಪೌರಕಾರ್ಮಿಕರ ಚಿತ್ರವನ್ನು ರಚಿಸಿದ್ದು, ಈ ಬಾರಿಯ ರಕ್ಷಾ ಬಂಧನವನ್ನು ಕೊರೊನಾ ವಾರಿಯರ್‌ಗಳೊಂದಿಗೆ ಆಚರಿಸೋಣ ಎಂದು ಬರೆದಿದ್ದಾರೆ.
ಈ ಫೋಟೋವನ್ನು ಟ್ವೀಟರ್‌ನಲ್ಲಿ ಹಾಕಿದ್ದು, ಭಾರಿ ವೈರಲ್ ಆಗಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ನಮ್ಮನ್ನು ರಕ್ಷಿಸುತ್ತಿರುವ ವಾರಿಯರ್ ಗಳಿಗೆ ಈ ರೀತಿಯ ಗೌರವ ತೋರುವುದು ಅಗತ್ಯವೆಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರು ಈ ಮರಳು ಕಲೆಯನ್ನು ಮೆಚ್ಚುವುದರೊಂದಿಗೆ, ಪಟ್ನಾಯಕ್ ಅವರ ಸಮಯ ಪ್ರಜ್ಞೆಗೆ ಶಹಬಾಸ್‌ಗಿರಿ ನೀಡಿದ್ದಾರೆ.