ಹಾಲಿ ಪತಿಯ ಎದುರೇ ಮಾಜಿ ಪತಿಯ ಸಹೋದರ ಮಹಿಳೆಯ ಮೇಲೆ ಅತ್ಯಾಚಾರಗೈದ ದಾರುಣ ಘಟನೆ ರಾಜಸ್ಥಾನದ ಬಾರನ್ ಜಿಲ್ಲೆಯಲ್ಲಿ ನಡೆದಿದೆ.
ಹಾಲಿ ಪತಿ, ಮಗು ಹಾಗೂ ಅಪ್ರಾಪ್ತ ಸಹೋದರಿಯ ಜೊತೆ ಸಂತ್ರಸ್ತೆ ಮನೆಗೆ ಮರಳುತ್ತಿದ್ದ ವೇಳೆಯಲ್ಲಿ ನಾಲ್ವರ ಜೊತೆಯಲ್ಲಿ ಬಂದ ಈಕೆಯ ಮಾಜಿ ಪತಿಯ ಸಹೋದರ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಹಾಲಿ ಪತಿಯ ಮೇಲೆ ದಾಳಿ ನಡೆಸಿದ ದುಷ್ಕಮಿಗಳು ಹಗ್ಗದ ಸಹಾಯದಿಂದ ಆತನ ಕೈ ಕಾಲುಗಳನ್ನ ಕಟ್ಟಿ ಹಾಕಿದ್ದಾರೆ. ಪತಿಯ ಎದುರಲ್ಲೇ ಆರೋಪಿ ಸಂತ್ರಸ್ತೆಯ ಮೇಲೆ ಅತ್ಯಾಚಾರಗೈದಿದ್ದಾನೆ ಎಂದು ಡಿಎಸ್ಪಿ ಯೋಗೇಂದ್ರ ಸಿಂಗ್ ಹೇಳಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಹಾಗೂ ಆತನ ಇಬ್ಬರು ಸಹಚರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಗು ಆಗಲಿಲ್ಲ ಎಂಬ ಕಾರಣಕ್ಕೆ ತನ್ನ 20ನೇ ವಯಸ್ಸಿನಲ್ಲಿ ಮೊದಲ ಪತಿಯನ್ನ ತ್ಯಜಿಸಿದ್ದ ಮಹಿಳೆ ಬಳಿಕ ಮದುವೆ ಸಮಾರಂಭವಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಡುವ ನಾಟಾ ಪ್ರಥಾ ಎಂಬ ಸಂಪ್ರದಾಯದ ಮೂಲಕ ಎರಡನೇ ಪತಿಯ ಜೊತೆ ವಾಸವಿದ್ದಳು ಎನ್ನಲಾಗಿದೆ.