ಮೊಬೈಲ್ ಡೇಟಾ ಖಾಲಿ ಮಾಡಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಕಿರಿಯ ಸಹೋದರನನ್ನ ಇರಿದು ಕೊಲೆ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ನವೆಂಬರ್ 18ರಂದು ಮನೆಯ ಛಾವಣಿ ಮೇಲೆ ರಕ್ತಸ್ರಾವ ನೋಡಿದ ಕುಟುಂಬಸ್ಥರು ಕೂಡಲೇ ಸಹೋದರನನ್ನ ಆಸ್ಪತ್ರೆಗೆ ದಾಖಲಿಸಿದರಾದರೂ ಆತ ಬದುಕುಳಿಯಲಿಲ್ಲ.
ಮೊಬೈಲ್ ಡೇಟಾ ಖಾಲಿ ಮಾಡಿದ ಕಾರಣಕ್ಕೆ ತಮ್ಮ ರಾಯ್ನನ್ನ ಮನೆಯ ಛಾವಣಿಗೆ ಕರೆದೊಯ್ದ ರಾಮನ್ ಆತನ ಮೇಲೆ ಹರಿಹಾಯ್ದಿದ್ದಾನೆ. ಅಲ್ಲದೇ ಆತನ ಎದೆಗೆ ನಾಲ್ಕೈದು ಬಾರಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿ ರಾಮನ್ ಮಾನಸಿಕ ಅಸ್ವಸ್ಥನಾಗಿದ್ದ ಅಂತಾ ಪೊಲೀಸರು ತಿಳಿಸಿದ್ದಾರೆ,
ಆರೋಪಿ ರಾಮ್ನನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ ಅಣ್ಣ ಮಾಡಿದ ತಪ್ಪಿಗೆ ಪೋಷಕರು ಜೀವಮಾನ ಪೂರ್ತಿ ಕಣ್ಣೀರಲ್ಲೇ ಕೈ ತೊಳೆಯುವಂತಾಗಿದೆ.