alex Certify ಕೊರೊನಾ ನಿಯಂತ್ರಣಕ್ಕೆ ರಾಜಸ್ಥಾನ ಸರ್ಕಾರದಿಂದ ಮಹತ್ವದ ತೀರ್ಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಿಯಂತ್ರಣಕ್ಕೆ ರಾಜಸ್ಥಾನ ಸರ್ಕಾರದಿಂದ ಮಹತ್ವದ ತೀರ್ಮಾನ

ರಾಜಸ್ಥಾನ ಸರ್ಕಾರ 13 ಜಿಲ್ಲೆಗಳಲ್ಲಿ ರಾತ್ರಿ 8 ಗಂಟೆಯಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ವಿಧಿಸಿದೆ. ಕೋಟಾ, ಜೈಪುರ, ಜೋದ್​ಪುರ, ಉದಯಪುರ, ಬಿಕಾನೆರ್, ಉದಯಪುರ, ಅಜ್ಮೀರ್, ಅಲ್ವಾರ್​, ಭಿಲ್ವಾರಾ, ನಾಗೋರ್​, ಪಾಲಿ, ಟೋಂಕ್​, ಸಿಕಾರ್​ ಹಾಗೂ ಗಂಗಾನಗರಕ್ಕೆ ಈ ಆದೇಶ ಅನ್ವಯವಾಗಲಿದೆ. ಡಿಸೆಂಬರ್ 1ರಿಂದ 31ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ.

ಎಲ್ಲ ಮಾರುಕಟ್ಟೆಗಳು ಹಾಗೂ ವಾಣಿಜ್ಯ ಸಂಕೀರ್ಣಗಳು ರಾತ್ರಿ 7 ಗಂಟೆಗೆ ಬಾಗಿಲು ಹಾಕಬೇಕು. ಆಗ ಮಾತ್ರ ಸಿಬ್ಬಂದಿ 8 ಗಂಟೆಯೊಳಗೆ ಮನೆ ಸೇರಲು ಸಾಧ್ಯವಾಗುತ್ತೆ. ಆದರೆ ರಾತ್ರಿ ಪಾಳಿ ಹೊಂದಿರುವ ಕಾರ್ಖಾನೆಗಳು, ಮೆಡಿಕಲ್​ ಶಾಪ್ ಗಳು, ಆಸ್ಪತ್ರೆ, ಮದುವೆ ಸಮಾರಂಭಕ್ಕೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ರಾಜಸ್ಥಾನ ಸರ್ಕಾರ ಹೇಳಿದೆ.

ಡಿಸೆಂಬರ್​ 31ರವರೆಗೆ ಕಂಟೈನ್ಮೆಂಟ್ ಝೋನ್​ಗಳಲ್ಲಿ ಲಾಕ್​ಡೌನ್​ ಜಾರಿಯಲ್ಲಿರುತ್ತೆ. ಈ ವಲಯದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶವಿದೆ. ಹಾಗೂ ಈ ವಲಯಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ. ಇನ್ನುಳಿದಂತೆ ಶಾಲಾ – ಕಾಲೇಜುಗಳು, ಶಿಕ್ಷಣ ತರಬೇತಿ ಸಂಸ್ಥೆಗಳು ಡಿಸೆಂಬರ್​ 31ರವರೆಗೂ ಬಂದ್​ ಇರಲಿದೆ. ಯಾವುದೇ ಸಭೆ, ಸಮಾರಂಭ ಹಾಗೂ ಧಾರ್ಮಿಕ ಕಾರ್ಯಕ್ಕೆ ಡಿಸೆಂಬರ್​ 31ರವರೆಗೆ ಅವಕಾಶವಿರೋದಿಲ್ಲ ಅಂತಾ ರಾಜಸ್ಥಾನ ಸರ್ಕಾರ ಪ್ರಕಟಣೆ ಹೊರಡಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...