alex Certify ಶಾಸಕರ ಅಂಗರಕ್ಷಕನ ಮೇಲೆ ಟೋಲ್‌ ಪ್ಲಾಜಾ ಸಿಬ್ಬಂದಿಯಿಂದ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಸಕರ ಅಂಗರಕ್ಷಕನ ಮೇಲೆ ಟೋಲ್‌ ಪ್ಲಾಜಾ ಸಿಬ್ಬಂದಿಯಿಂದ ಹಲ್ಲೆ

ಶಾಕಿಂಗ್ ಘಟನೆಯೊಂದರಲ್ಲಿ, ರಾಜಸ್ಥಾನದ ಕಾಂಗ್ರೆಸ್ ಶಾಸಕ ಜಗದೀಶದ ಜಂಗಿಡ್ ಅವರ ಕಾರನ್ನು ಅಡ್ಡಗಟ್ಟಿದ ಟೋಲ್ ಪ್ಲಾಜಾ ಕೆಲಸಗಾರರು ಅವರ ಗನ್ ಮನ್ ಹಾಗೂ ಚಾಲಕನ ಮೇಲೆ ದಾಳಿ ಮಾಡಿದ್ದಾರೆ. ಘಟನೆಯ ದೃಶ್ಯಾವಳಿಗಳನ್ನು ಸಿಸಿ‌ ಟಿವಿ ಕ್ಯಾಮೆರಾಗಳು ಸೆರೆ ಹಿಡಿದಿವೆ.

ಟೋಲ್ ಸಿಬ್ಬಂದಿಯನ್ನು ಗೂಂಡಾಗಳು ಎಂದು ಕರೆದ ಜಗದೀಶ್, “ಒಬ್ಬ ಚುನಾಯಿತ ಪ್ರತಿನಿಧಿ ಮೇಲೆಯೇ ಇಂಥ ದಾಳಿ ಮಾಡಲು ಮುಂದಾಗಬಲ್ಲರು ಎಂದರೆ ಸಾಮಾನ್ಯ ನಾಗರಿಕರ ಕಥೆ ಏನು?” ಎಂದು ಪ್ರಶ್ನಿಸಿದ್ದಾರೆ.

“ನನ್ನ ಕಾರು ಟೋಲ್ ಪ್ಲಾಜಾ ದಾಟಿ ಹೋಗಬೇಕು ಎನ್ನುವಷ್ಟರಲ್ಲಿ ಅವರು ಬ್ಯಾರಿಕೇಡ್‌ಗಳನ್ನು ಎಳೆದಿದ್ದಾರೆ. ನನ್ನ ಚಾಲಕನ ಸಮಯಪ್ರಜ್ಞೆಯಿಂದ ಕಾರಿಗೆ ಏನೂ ಆಗಿಲ್ಲ. ನನ್ನ ಗನ್‌ಮನ್ ಹಾಗೂ ಚಾಲಕ ವಾಹನದಿಂದ ಇಳಿದು ಸಿಬ್ಬಂದಿ ಜೊತೆಗೆ ಮಾತನಾಡಲು ಮುಂದಾದಾಗ ಅವರ ಮೇಲೆ ದಾಳಿ ಮಾಡಲಾಗಿದೆ. ಕಚೇರಿಗಳಲ್ಲಿದ್ದ 15-20 ಮಂದಿ ಹೊರಬಂದು ಅವರ ಮೇಲೆ ದಾಳಿ ಮಾಡಲು ಆರಂಭಿಸಿದ್ದಾರೆ” ಎಂದು ಜಗದೀಶ್ ಘಟನೆಯನ್ನು ವಿವರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...