ಕೊರೊನಾ ವೈರಸ್ ಗಂಭೀರತೆ ಜನರನ್ನು ಹೈರಾಣಾಗಿಸುತ್ತಿದೆ. ಜನ ಪ್ರತಿನಿಧಿಗಳನ್ನೂ ಅದು ಬಿಡುತ್ತಿಲ್ಲ. ದೇಶದಲ್ಲಿ ಹತ್ತಾರು ಮಂದಿ ಶಾಸಕ, ಸಂಸದ, ಮಂತ್ರಿಗಳು ಕೊರೊನಾಗೆ ಬಲಿಯಾಗಿದ್ದಾರೆ.
ಇದೀಗ ಗುರಗಾಂವ್‌ನ ಆಸ್ಪತ್ರೆಯಲ್ಲಿ ಕೋವಿಡ್ ನಂತರದ ತೊಂದರೆಗಳಿಂದ ರಾಜಸ್ಥಾನದ ಕಾಂಗ್ರೆಸ್ ಶಾಸಕ ಕೈಲಾಶ್ ಚಂದ್ರ ತ್ರಿವೇದಿ ಮೃತಪಟ್ಟಿದ್ದಾರೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಅವರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಬಳಿಕ ರಾಜಸ್ಥಾನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಚಿಕಿತ್ಸೆ ಬಳಿಕ ಬಳಿಕ ಕೊರೊನಾ ನೆಗೆಟಿವ್ ವರದಿ ಬಂದಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆದರೆ ಅವರು ಮಧುಮೇಹ ರೋಗಿಯಾಗಿದ್ದರಿಂದ ನಂತರ ಇತರೆ ಆರೋಗ್ಯ ಸಮಸ್ಯೆ ಹೆಚ್ಚಾಯಿತು. ಬಳಿಕ ಅಕ್ಟೋಬರ್ 2 ಜೈಪುರದಿಂದ ಗುರಗಾಂವ್‌ನ ಮೆದಂತಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ತ್ರಿವೇದಿ ಅವರು ರಾಜಸ್ಥಾನದ ಸಹಾರಾ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದರು. ಅವರ ನಿಧನಕ್ಕೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಂಗಳವಾರ ಸಂತಾಪ ಸೂಚಿಸಿದ್ದಾರೆ.