ನವದೆಹಲಿ: ಪ್ರಧಾನಿ ಮೋದಿ ಭಾರತದ ಭೂ ಭಾಗವನ್ನು ಚೀನಾಗೆ ಒಪ್ಪಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ನಮ್ಮ ದೇಶದ ಒಂದಿಂಚೂ ಭೂಭಾಗವನ್ನು ಚೀನಾ ಅತಿಕ್ರಮಿಸಿಲ್ಲ ಎಂದು ಮೋದಿ ಹೇಳಿರುವುದರಕ್ಕೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, ಯಾರೂ ಭಾರತದ ಭೂಭಾಗವನ್ನು ಅತಿಕ್ರಿಮಿಸಿಲ್ಲ ಎಂದು ಹೇಳಿದ್ದೀರಿ. ಹಾಗಾದ್ರೆ ಸೈನಿಕರನ್ನು ಕೊಂದಿದ್ದು ಏಕೆ? ಯಾವ ಸ್ಥಳದಲ್ಲಿ ನಮ್ಮ ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ಭಾರತದ ಭೂ ಭಾಗದಲ್ಲಿ ಯಾವುದೇ ವಿದೇಶಿಯರು ಇಲ್ಲ ಎಂದು ಮೋದಿ ಹೇಳಿದ್ದಾರೆ. ಇದು ನಿಜವಾದರೆ ಮೇ 5 ಮತ್ತು 6 ರಂದು ಏನು ನಡೆಯಿತು ಎಂದು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಪ್ರಶ್ನಿಸಿದ್ದಾರೆ. ಜೂನ್ 16 ಮತ್ತು 17ರಂದು ಸೈನಿಕರ ನಡುವೆ ಘರ್ಷಣೆ ನಡೆದಿದ್ದು ಏಕೆ? ಭಾರತದ 20 ಸೈನಿಕರು ಜೀವ ಕಳೆದುಕೊಂಡಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.