ಅಂಬಾಲಾ ವಾಯುನೆಲೆಯಲ್ಲಿರುವ ಯುದ್ಧ ವಿಮಾನ ರಾಫೆಲ್ ಸುರಕ್ಷತೆಯ ದೃಷ್ಟಿಯಿಂದ ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್, ಹರಿಯಾಣದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅಂಬಾಲಾ ವಾಯುನೆಲೆಯಲ್ಲಿರುವ ರಾಫೆಲ್ ವಿಮಾನದ ಸುರಕ್ಷತೆಗೆ ಅಲ್ಲಿ ಹಾರಾಡುವ ಪಕ್ಷಿಗಳಿಂದ ಧಕ್ಕೆಯಾಗ್ತಿದೆ. ಅಲ್ಲಿ ಹಾಡಾಡ್ತಿರುವ ಪಕ್ಷಗಳಿಂದ ರಾಫಲ್ ಗೆ ಬೆದರಿಕೆಯಿದೆ. ಸೂಕ್ತ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದ್ದರು.
ಏರ್ ಮಾರ್ಷಲ್ ಪತ್ರದ ನಂತ್ರ ಅಲ್ಲಿನ ಆಡಳಿತಾಧಿಕಾರಿಗಳು ವಾಯುನೆಲೆಯ ಸುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಪಾರಿವಾಳಗಳನ್ನು ಹಾರಿಸುವ ಜನರಿಗೆ ನೋಟಿಸ್ ನೀಡಿದ್ದಾರೆ. ಪಾರಿವಾಳ ಹಾರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಇದಕ್ಕೂ ಮೊದಲು ಹರಿಯಾಣದ ಅಂಬಾಲಾದಲ್ಲಿರುವ ಭಾರತೀಯ ವಾಯುಪಡೆ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬಂದಿತ್ತು, ಈ ಪತ್ರವನ್ನು ಶುಕ್ರವಾರ ಸ್ವೀಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತ್ರ ಅಧಿಕಾರಿಗಳು ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.