
ಭಾರತೀಯ ವಾಯುಪಡೆಗೆ ಇಂದು ಸುದಿನ. ದೀರ್ಘ ಕಾಯುವಿಕೆ ಇಂದು ಕೊನೆಗೊಳ್ಳಲಿದೆ. ಯುದ್ಧ ವಿಮಾನ, ರಫೇಲ್ ಇಂದು ಭಾರತಕ್ಕೆ ಬರಲಿದೆ. ಫ್ರಾನ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡ ನಂತ್ರ ರಫೇಲ್, ಹರಿಯಾಣದ ಅಂಬಾಲಾ ವಾಯುನೆಲೆಗೆ ತಲುಪಲಿದೆ.
ಈ 5 ರಫೇಲ್ ಜೆಟ್‌ಗಳನ್ನು ಸ್ವೀಕರಿಸಲು ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭಡೋರಿಯಾ ಅಂಬಾಲಾ ಏರ್‌ಬೇಸ್‌ನಲ್ಲಿ ಹಾಜರಿದ್ದಾರೆ. ಭದ್ರತೆಯ ದೃಷ್ಟಿಯಿಂದ ಅಂಬಾಲಾದಲ್ಲಿ ಸೆಕ್ಷನ್ 144 ವಿಧಿಸಲಾಗಿದೆ.
ಜುಲೈ 27 ರಂದು, 5 ರಫೇಲ್ ಫೈಟರ್ ಜೆಟ್ ಫ್ರಾನ್ಸ್ ನಿಂದ ಭಾರತಕ್ಕೆ ಹೊರಟಿತ್ತು. ವಿಮಾನವು ಭಾರತೀಯ ಸಮಯ ಮಧ್ಯಾಹ್ನ 12:30 ಕ್ಕೆ ಹೊರಟಿತು. ನಿರಂತರವಾಗಿ 7 ಗಂಟೆಗಳ ಕಾಲ ಹಾರಾಟ ಮಾಡಿದ ನಂತರ, ಸಂಜೆ ಅಬುಧಾಬಿ ಬಳಿಯ ವಾಯುನೆಲೆಗೆ ತಲುಪಿತ್ತು. ಇಂದು ಜುಲೈ 29 ರಂದು ಬೆಳಿಗ್ಗೆ ಮತ್ತೆ ಹಾರಾಟ ಶುರುವಾಗಿದೆ. ಮಧ್ಯಾಹ್ನದ ನಂತರ ಯಾವುದೇ ಸಮಯದಲ್ಲಿ ಈ ಐದು ಯುದ್ಧ ವಿಮಾನ ಅಂಬಾಲಕ್ಕೆ ಬಂದಿಳಿಯಲಿದೆ. ರಫೇಲ್ ಆಗಮನದ ಹಿನ್ನಲೆಯಲ್ಲಿ ಅಂಬಾಲದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಈವರೆಗೆ 15-17 ಪೈಲಟ್ ಗಳು ಇದ್ರ ಹಾರಾಟ ನಡೆಸಬಲ್ಲರು. 30 ಪೈಲಟ್ ಗಳಿಗೆ ತರಬೇತಿ ನೀಡಲಾಗ್ತಿದೆ. ಉಳಿದಂತೆ 150-200 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.