ನಾಯಿ, ಬೆಕ್ಕನ್ನು ಕೆಲವರು ಮನೆಯ ಮನುಷ್ಯರಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಅವೂ ಮನೆಯ ಮಕ್ಕಳಂತೆ ಕಿಲಾಡಿ ಮಾಡುತ್ತವೆ. ಮನೆಯವರನ್ನು ಪ್ರೀತಿಯಿಂದ ಪ್ರಾಣಕ್ಕಿಂತ ಹೆಚ್ಚಾಗಿ ಕಾಣುವ ಎಷ್ಟೋ ಉದಾಹರಣೆಗಳಿವೆ. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಅವರು ಸಾಕು ಪ್ರಾಣಿಗಳನ್ನು ಇನ್ನಷ್ಟು ಹಚ್ಚಿಕೊಳ್ಳುತ್ತಾರೆ.
ಸ್ಟ್ರೀಟ್ ಡಾಗ್ ಅಫ್ ಮುಂಬೈ ಎಂಬ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಆದ ವಿಡಿಯೋವೊಂದು ಇಂಥ ಅಪರೂಪದ ಬಾಂಧವ್ಯವನ್ನು ತೋರಿಸುತ್ತದೆ.
ಸುಮಾರು 5 ವರ್ಷದ ಪುಟ್ಟ ಬಾಲಕಿ ತನಗಿಂತ ದೊಡ್ಡದಿರುವ ಜರ್ಮನ್ ಶಫರ್ಡ್ ನಾಯಿಗೆ ಕೈ ತುತ್ತು ನೀಡುವ ವಿಡಿಯೋ ಇದಾಗಿದೆ. ನಾಯಿಯೂ ಅಷ್ಟೇ ಪ್ರೀತಿಯಿಂದ ಬಾಲಕಿ ಕೈಗೆ ಕೊಂಚವೂ ಹಾನಿಯಾಗದಂತೆ ಕೈ ತುತ್ತು ತಿನ್ನುತ್ತದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರನ್ನು ಫಿದಾ ಮಾಡಿದೆ. ಭರಪೂರ ಪ್ರತಿಕ್ರಿಯೆಗಳೂ ಹರಿದಾಡಿವೆ.
https://www.instagram.com/p/CBzywtDH-ZI/?utm_source=ig_embed