ರೈತ ಪ್ರತಿಭಟನೆ ವಿಚಾರದಲ್ಲಿ ತಲೆಮರೆಸಿಕೊಂಡಿರುವ ಪಂಜಾಬಿ ನಟ ದೀಪ್ ಸಿಧು ಸ್ಪಷ್ಟೀಕರಣ ನೀಡಿದ್ದ ವಿಡಿಯೋವನ್ನ ಫೇಸ್ಬುಕ್ನಲ್ಲಿ ವಿದೇಶದಲ್ಲಿರುವ ಆಕೆಯ ಗೆಳತಿ ಪೋಸ್ಟ್ ಮಾಡಿದ್ದಾಳೆ ಎಂಬ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದೀಪ್ ಸಿಧು ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು ಈತನ ಪತ್ತೆಗೆ ಸುಳಿವು ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ಘೋಷಿಸಿದ್ದಾರೆ.
ಪ್ರಸ್ತುತ ದೀಪ್ ಸಿಧು ಫೇಸ್ಬುಕ್ ಖಾತೆಯನ್ನ ಆತನ ಗೆಳತಿ ನೋಡಿಕೊಳ್ತಿದ್ದಾರೆ ಎನ್ನಲಾಗಿದೆ. ಬಹುಶಃ ಆತ ಆಕೆಗೆ ಸ್ಪಷ್ಟೀಕರಣದ ವಿಡಿಯೋ ಕಳಿಸಿರಬಹುದು ಹಾಗೂ ಆಕೆ ಈ ವಿಡಿಯೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.