
ಇದು ಹಳೆಯ ವಿಡಿಯೋವಾಗಿದ್ದು, ಮೆವಾಲಾಲ್ ಚೌಧರಿ ಜನಗಣ ಮನವನ್ನ ತಪ್ಪುತಪ್ಪಾಗಿ ಹಾಡಿದ್ದಾರೆ.
ಈ ವಿಡಿಯೋ ಪೋಸ್ಟ್ ಮಾಡಿರುವ ಆರ್ಜೆಡಿ, 7 ಭ್ರಷ್ಟಾಚಾರ ಪ್ರಕರಣಗಳ ಆರೋಪ ಹೊತ್ತಿರುವ ಮೆವಾಲಾಲ್ಗೆ ರಾಷ್ಟ್ರಗೀತೆಯೇ ಗೊತ್ತಿಲ್ಲ. ಇಂತಹ ವ್ಯಕ್ತಿಯನ್ನ ನೀವು ಶಿಕ್ಷಣ ಮಂತ್ರಿಯನ್ನಾಗಿ ಮಾಡೋಕೆ ನಿತೀಶ್ ಕುಮಾರ್ ಸರ್ಕಾರಕ್ಕೆ ನಾಚಿಕೆ ಆಗೋದಿಲ್ವಾ ಅಂತಾ ಪ್ರಶ್ನೆ ಮಾಡಿದೆ.
ಪಂಜಾಬ್ ಸಿಂಧ್ ಗುಜರಾತಾ ಮರಾಠಾ ಎಂದು ಹೇಳುವ ಬದಲು ಮೆವಾಲಾಲ್ ಚೌಧರಿ ಪಂಜಾಬ್ ವಸಂತ್ ಗುಜರಾತ ಮರಾಠಾ ಎಂದು ಹಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಿಕ್ಷಣ ಮಂತ್ರಿಯೇ ಈ ತಪ್ಪನ್ನ ಮಾಡಿದ್ರೆ ಇನ್ನು ಮಕ್ಕಳ ಕತೆ ಏನು ಅಂತಾ ಪ್ರಶ್ನೆ ಮಾಡಿದ್ದಾರೆ.