
ಅಕ್ಟೋಬರ್ 15 ರಿಂದ ಶ್ರೇಣಿಕೃತ ರೀತಿಯಲ್ಲಿ ಶಾಲೆಗಳು ಮತ್ತು ತರಬೇತಿ ಸಂಸ್ಥೆಗಳನ್ನು ಪುನರಾರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಂಜಾಬ್ ಸರ್ಕಾರ ತಿಳಿಸಿದೆ.
9 ರಿಂದ 12 ನೇ ತರಗತಿ ವಿದ್ಯಾರ್ಥಿಗಳು, ಪೋಷಕರ ಒಪ್ಪಿಗೆಯೊಂದಿಗೆ ಶಾಲೆಗೆ ಬರಬಹುದಾಗಿದೆ. ಹಾಜರಾತಿ ಕಡ್ಡಾಯಗೊಳಿಸದೇ ಶಾಲೆಗೆ ಹಾಜರಾಗಲು ಅನುಮತಿ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಆನ್ಲೈನ್ ತರಗತಿಗಳು ಆದ್ಯತೆಯ ಬೋಧನಾ ವಿಧಾನವಾಗಿ ಮುಂದುವರೆಯಲಿವೆ. ಈ ಅವಧಿಯಲ್ಲಿ ಆನ್ಲೈನ್ ತರಗತಿಗಳಿಗೆ ಪ್ರೋತ್ಸಾಹ ನೀಡಲಾಗುವುದು. ಶಾಲೆಗಳಲ್ಲಿ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕಿದೆ ಎಂದು ಹೇಳಲಾಗಿದೆ.