ಪಬ್ ಜಿ ಆಟದ ಹುಚ್ಚು ಹಿಡಿಸಿಕೊಂಡಿದ್ದ 17ರ ಹರೆಯದ ಯುವಕ, ತಂದೆಯ 16 ಲಕ್ಷ ರೂ.ಗಳನ್ನು ಇದಕ್ಕಾಗಿ ವ್ಯಯಿಸಿದ್ದ. ಆನ್ ಕ್ಲಾಸ್ ಎಂದು ಸುಳ್ಳು ಹೇಳಿ ತಂದೆಯ ಮೊಬೈಲ್ ಪಡೆದು, ಅದರಲ್ಲಿದ್ದ ಬ್ಯಾಂಕ್ ಖಾತೆ ಸಂಖ್ಯೆ, ಪಾಸ್ ವರ್ಡ್ ಇತ್ಯಾದಿ ವಿವರ ಪಡೆದು ತಂದೆಗೆ ತಿಳಿಯದಂತೆ 16 ಲಕ್ಷ ಖರ್ಚು ಮಾಡಿದ್ದಾನೆ. ತನಗಷ್ಟೇ ಅಲ್ಲದೆ, ಪಬ್ ಜಿ ತಂಡ ಕಟ್ಟಿಕೊಳ್ಳಲು ಗೆಳೆಯರಿಗೂ ಖರ್ಚು ಮಾಡಿದ್ದಾನೆ.
ಇದನ್ನರಿತ ತಂದೆ, ಅವನನ್ನ ಸ್ಕೂಟರ್ ಗ್ಯಾರೇಜ್ ಅಲ್ಲಿ ಕೆಲಸಕ್ಕೆ ಬಿಟ್ಟಿದ್ದಾರೆ. ಮಗನನ್ನು ಸುಮ್ಮನೆ ಮನೆಯಲ್ಲಿ ಕೂರಲು ಬಿಡುವುದಿಲ್ಲ. ಯಾವ ತರಗತಿ ಇದೆ ಎಂದರೂ ಮೊಬೈಲ್ ಕೊಡುವುದಿಲ್ಲ. ಬ್ಯಾಂಕ್ ಸ್ಟೇಟ್ಮೆಂಟ್ ಗಮನಿಸಿ ನಾನೇ ಶಾಕ್ ಆದೆ. ಶ್ರಮ ಮತ್ತು ಹಣದ ಬೆಲೆ ಏನೆಂದು ಅವನಿಗೆ ತಿಳಿಯಬೇಕು. ಹಾಗಾಗಿಯೇ ಸ್ಕೂಟರ್ ಗ್ಯಾರೇಜ್ ಸೇರಿಸಿದ್ದೇನೆ ಎಂದಿದ್ದಾರೆ.
ಪಬ್ ಜಿ ವ್ಯಸನಿಗಳ ಅನಾಹುತ ಇದೇ ಮೊದಲಲ್ಲ. ಇತ್ತೀಚೆಗೆ ಪಬ್ಜಿ ಗೇಮ್ ಗಾಗಿ ಗುಜರಾತ್ ನಲ್ಲಿ 12 ವರ್ಷದ ಹುಡುಗ ಪೋಷಕರ 3 ಲಕ್ಷ ರೂ. ಕದ್ದು ಸಿಕ್ಕಿಬಿದ್ದಿದ್ದನ್ನೂ ಸ್ಮರಿಸಬಹುದು.