ದೆಹಲಿ-ಹರಿಯಾಣಾ ಗಡಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರ ಗುಂಪಿನ ನಡುವೆ ಸ್ಟಾಲ್ ಒಂದನ್ನು ಹಾಕಲಾಗಿದ್ದು, ಅದೀಗ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಟ್ಯಾಟೂ ಕಲಾವಿದ ಚೇತನ್ ಸೂದ್ ಹಾಗೂ ಆತನ ಐವರು ಮಿತ್ರರು ಸೇರಿಕೊಂಡು ಪ್ರತಿಭಟನೆಯಲ್ಲಿ ನಿರತರಾದ ಮಂದಿಯ ತೋಳುಗಳ ಮೇಲೆ ಉಚಿತವಾಗಿ ಟ್ಯಾಟೂ ಹಾಕಿಕೊಡುತ್ತಿದ್ದಾರೆ.
ರೈತರ ಪ್ರತಿಭಟನೆಗೆ ತಮ್ಮ ಕೈಯಲ್ಲಿ ಆದ ಮಟ್ಟದಲ್ಲಿ ನೆರವು ನೀಡಲು ಮುಂದಾದ ಚೇತನ್ & ಕೋ, ತಮಗೆ ತಿಳಿದಿರುವ ಕಲೆಯ ಮೂಲಕವೇ ಅನ್ನದಾತರಿಗೆ ಬೆಂಬಲ ಸೂಚಿಸಿದ್ದಾರೆ. ದೆಹಲಿ-ಹರಿಯಾಣಾ ಗಡಿಯ ಬಳಿ ಇಂಗ್, ಟ್ಯಾಟೂ ಯಂತ್ರಗಳು, ಸೂಜಿಗಳು ಹಾಗೂ ಸ್ಟೆನ್ಸಿಲ್‌ಗಳನ್ನು ತಂದು ಟ್ಯೂಟೂ ಹಾಕುತ್ತಿದ್ದಾರೆ.
ಕೃಷಿಯನ್ನೇ ಥೀಮ್ ಮಾಡಿಕೊಂಡು ಟ್ಯಾಟೂಗಳನ್ನು ಹಾಕಲಾಗುತ್ತಿದೆ. ಬೆಳೆ ಬಿತ್ತನೆಯಿಂದ, ಕಟಾವಿನವರೆಗೂ ಕೃಷಿಯ ವಿವಿಧ ಪ್ರಕ್ರಿಯೆಗಳನ್ನು ಈ ಟ್ಯಾಟೂಗಳು ಬಿತ್ತರಿಸುತ್ತಿವೆ. ಶಾಶ್ವತವಾಗಿ ಉಳಿಯುವ ಇಂಥ ಒಂದೊಂದು ಟ್ಯಾಟೂ ಹಾಕಲು 3500 ರೂ.ಗಳು ಖರ್ಚಾಗಲಿದ್ದು, ಪ್ರತಿಭಟನೆಯಲ್ಲಿ ಇರುವ ಮಂದಿಗೆ ಉಚಿತವಾಗಿ ಹಾಕಿ ಕೊಡುತ್ತಿದ್ದೇವೆ ಎಂದು ಚೇತನ್ ತಿಳಿಸಿದ್ದಾರೆ.
ಕೃಷಿ ಉತ್ಪನ್ನಗಳ ಮಾರಾಟ ಹಾಗು ಅತ್ಯಗತ್ಯ ವಸ್ತುಗಳ ಪೂರೈಕೆ ಸಂಬಂಧ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕಾನೂನುಗಳ ವಿರುದ್ಧ ಪಂಜಾಬ್-ಹರಿಯಾಣಾ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.
https://twitter.com/rupashreenanda/status/1339883411213672449?ref_src=twsrc%5Etfw%7Ctwcamp%5Etweetembed%7Ctwterm%5E1339883411213672449%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fpunjab-artist-is-giving-free-tattoos-at-singhu-border-to-show-support-for-protesting-farmers-3190949.html
https://twitter.com/PunYaab/status/1339840970506915840?ref_src=twsrc%5Etfw%7Ctwcamp%5Etweetembed%7Ctwterm%5E1339840970506915840%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fpunjab-artist-is-giving-free-tattoos-at-singhu-border-to-show-support-for-protesting-farmers-3190949.html