ಅಮೃತಸರ್: ಚಲಿಸುತ್ತಿದ್ದ ಕಾರ್ ನಲ್ಲಿ ಕ್ಯಾಬ್ ಚಾಲಕ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದು, ಗಾಬರಿಯಾದ ಯುವತಿಯರು ಕಾರ್ ನಿಂದ ಹಾರಿದ್ದಾರೆ.
ಅಮೃತಸರದಲ್ಲಿ ಘಟನೆ ನಡೆದಿದೆ. ಮೂವರು ಮಹಿಳೆಯರು ಕಾರ್ ನಲ್ಲಿ ಪ್ರಯಾಣಿಸುವಾಗ ಕ್ಯಾಬ್ ಚಾಲಕ ಒಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಕಾರನ್ನು ಅತಿವೇಗವಾಗಿ ಚಾಲನೆ ಮಾಡಿದ್ದಾನೆ. ಇದರಿಂದ ಗಾಬರಿಯಾದ ಇಬ್ಬರು ಮಹಿಳೆಯರು ಕಾರ್ ಡೋರ್ ತೆಗೆದು ಕೆಳಗೆ ಹಾರಿದ್ದಾರೆ.
ಚಲಿಸುತ್ತಿದ್ದ ಕಾರ್ ನಿಂದ ಮಹಿಳೆಯರು ಜಿಗಿದಿದ್ದನ್ನು ಗಮನಿಸಿದ ಜನ ಅವರನ್ನು ರಕ್ಷಿಸಿದ್ದು ಕಾರ್ ಬೆನ್ನಟ್ಟಿ ಅದರಲ್ಲಿದ್ದ ಮತ್ತೊಬ್ಬ ಮಹಿಳೆಯನ್ನು ರಕ್ಷಿಸಿದ್ದಾರೆ.
ಅಮೃತಸರದ ರಂಜಿತ್ ಅವೆನ್ಯೂ ಬಳಿ ರಾತ್ರಿ ಊಟಕ್ಕೆ ಹೋಟೆಲ್ ಗೆ ಹೋಗುತ್ತಿದ್ದ ಮಹಿಳೆಯರೊಂದಿಗೆ ಕ್ಯಾಬ್ ಚಾಲಕ ಅನುಚಿತವಾಗಿ ವರ್ತಿಸಿದ್ದಾನೆ. ಕ್ಯಾಬ್ ಚಾಲಕನನ್ನು ಬಂಧಿಸಲಾಗಿದೆ. ಸಣ್ಣಪುಟ್ಟ ಗಾಯಗಳಾದ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ರಾಬಿನ್ ಹನ್ಸ್ ಮಾಹಿತಿ ನೀಡಿದ್ದಾರೆ.