ಕೋವಿಡ್ 19 ಸಾಂಕ್ರಾಮಿಕದಿಂದಾಗಿ ವೈದ್ಯಕೀಯ ಲೋಕಕ್ಕೆ ದೊಡ್ಡ ಸವಾಲು ಎದುರಾಗಿರೋದ್ರ ಜೊತೆ ಜೊತೆಗೇ ತ್ಯಾಜ್ಯ ನಿರ್ವಹಣಾ ಘಟಕಕ್ಕೂ ಕಸ ವಿಲೇವಾರಿ ಮಾಡೋದು ದೊಡ್ಡ ಕಷ್ಟವಾಗಿದೆ. ವೈದ್ಯಕೀಯ ತ್ಯಾಜ್ಯಗಳನ್ನ ವಿಲೇವಾರಿ ಮಾಡೋದು ಅಂದರೆ ಸುಲಭದ ಕೆಲಸವಲ್ಲ.
ಕಸ ವಿಲೇವಾರಿ ಘಟಕದ ಸಿಬ್ಬಂದಿಯ ಕಷ್ಟವನ್ನ ಗಮನದಲ್ಲಿಟ್ಟುಕೊಂಡು ಪುಣೆ ಮೂಲದ ಸ್ಟಾರ್ಟಪ್ ಕಂಪನಿಯೊಂದು ಜಟಾಯು ಎಂಬ ಹೆಸರಿನ ಕಸ ಆಯುವ ಮಷಿನ್ನ್ನು ಕಂಡು ಹಿಡಿದಿದೆ. ಈ ಮಷಿನ್ನ ಸಹಾಯದಿಂದ ಕಸ ವಿಲೇವಾರಿ ಮಾಡುವ ವ್ಯಕ್ತಿ ಕೈಯನ್ನ ಬಳಸದೇ ಕಸವನ್ನ ಆಯಬಹುದಾಗಿದೆ.
ಅಭಿಷೇಕ್ ಶೇಲಾರ್ ಎಂಬವರು ಈ ಮಷಿನ್ ನಿರ್ಮಾಣದ ಹಿಂದಿರುವ ವ್ಯಕ್ತಿಯಾಗಿದ್ದಾರೆ. ದೇಶದಲ್ಲಿ ಕಸ ಆಯುವವರ ಆರೋಗ್ಯ, ಸುರಕ್ಷತೆ ಹಾಗೂ ಘನತೆಯನ್ನ ಗಮನದಲ್ಲಿರಿಸಿಕೊಂಡು ಅಭಿಷೇಕ್ ಜಟಾಯುವನ್ನ ಕಂಡು ಹಿಡಿದಿದ್ದಾರೆ. ಕೋವಿಡ್ ತ್ಯಾಜ್ಯಗಳನ್ನ ವಿಲೇವಾರಿ ಮಾಡುವಾಗ ಕೆಲಸಗಾರರಿಗೆ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಅಪಾಯವಿರುತ್ತದೆ. ಹೀಗಾಗಿ ಜಟಾಯು ಹೆಚ್ಡಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ.
ಅಂಚೆ ಕಚೇರಿ ಈ ಯೋಜನೆಯಲ್ಲಿ ಪ್ರತಿ ತಿಂಗಳು 5 ಸಾವಿರ ಹೂಡಿಕೆ ಮಾಡಿದ್ರೆ ಸಿಗಲಿದೆ 7.25 ಲಕ್ಷ
ದೆಹಲಿ ಮುನ್ಸಿಪಾಲ್ ಕಚೇರಿ ಈ ಮಷಿನ್ನ್ನು ಮೊದಲು ಖರೀದಿ ಮಾಡಿದೆ. ದೆಹಲಿಯ ಬಯೋಟಿಕ್ ತ್ಯಾಜ್ಯ ನಿರ್ವಹಣಾ ಘಟಕ ನೀಡಿರುವ ಮಾಹಿತಿಯ ಪ್ರಕಾರ ಕಳೆದ ವರ್ಷ ಬರೋಬ್ಬರಿ 7.2 ಕೋಟಿ ಟನ್ ಕೋವಿಡ್ 19 ತ್ಯಾಜ್ಯ ಸಂಗ್ರಹಿಸಲಾಗಿದೆ. ಇದು ಈ ವರ್ಷದ ಏಪ್ರಿಲ್ ಅಂತ್ಯದ ವೇಳೆ 12.5-13 ಟನ್ನಷ್ಟಾಗಿದೆ.