ಆಲೂಗಡ್ಡೆ ಇದ್ದರೆ ಬಿರಿಯಾನಿಯೋ ? ಇಲ್ಲದಿದ್ದರೆ ಬಿರಿಯಾನಿಯೋ ? ಪುಣೆಯ ಹೋಟೆಲ್ ವೊಂದರ ಮುಂದಿರುವ ಫಲಕದಿಂದ ಟ್ವಿಟ್ಟರ್ ನಲ್ಲಿ ಭಾರೀ ಸಮರವೇ ನಡೆಯುತ್ತಿದ್ದು, ಹೈದರಾಬಾದಿ ಬಿರಿಯಾನಿ ಬಿಟ್ಟು ಬೇರೆಲ್ಲವೂ ಪಲಾವ್ ಎಂದು ಕರೆದಿದೆ.
ಅಷ್ಟೇ ಅಲ್ಲದೆ, ಬಿರಿಯಾನಿ ನೀತಿಯನ್ನೇ ಪುರಾತನ ಹೈದರಾಬಾದ್ ಹೆಸರಿನ ಫಲಕದಲ್ಲಿ ಪ್ರಕಟಿಸಿದ್ದು, ಬಾಂಬೆ ಮತ್ತು ಪಾಕಿಸ್ತಾನಿ ಬಿರಿಯಾನಿಯನ್ನು ಇನ್ನು ಮುಂದೆ ಮಟನ್ ಮಸಾಲಾ ರೈಸ್ ಎಂದೇ ಕರೆಯಬೇಕು. ಯಾವುದನ್ನೇ ಆಗಲೀ, ಆಲೂಗಡ್ಡೆ ಜೊತೆ ಸೇರಿಸಿ ಕರೆದರೆ ಅದು ಅಕ್ರಮ ಎಂದಿದೆ.
ಆಲೂ ಜೊತೆಗಿರುವ ಅನ್ನವನ್ನು ಬಟಾಟಾ ವಡಾ ರೈಸ್ ಎನ್ನಬೇಕು ಎಂದು ಉಲ್ಲೇಖಿಸಿದೆ. ಟ್ವಿಟ್ಟರ್ ನಲ್ಲಿ ವೈರಲ್ ಆಗಿರುವ ಈ ಫಲಕ ಬಿರಿಯಾನಿ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟಿ ಹಾಕಿದ್ದು, ಆಲೂಗಡ್ಡೆ ಹಾಕಿ ಮಾಡುವ ಕೋಲ್ಕತ್ತಾ ಬಿರಿಯಾನಿ ಪರವಾಗಿ ಹಲವರು ಕಮೆಂಟ್ ಗಳನ್ನ ಪೋಸ್ಟ್ ಮಾಡಿದ್ದಾರೆ. ತಮ್ಮ ಬಿರಿಯಾನಿಯೇ ಶ್ರೇಷ್ಠ, ಕನಿಷ್ಠ ಎಂಬ ಚರ್ಚೆ ಶುರುವಾಗಿದೆ.
https://twitter.com/MediaSumit/status/1278302589109497858?ref_src=twsrc%5Etfw%7Ctwcamp%5Etweetembed%7Ctwterm%5E1278302589109497858%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fpune-restaurants-bizarre-signboard-saying-all-biryani-except-hyderabadi-is-pulao-starts-online-war-2699715.html