ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಬಹುಮುಖ್ಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಅನೇಕ ರೀತಿ ಜಾಗೃತಿ ಮೂಡಿಸಿದರೂ ಜನ ಕೇಳುತ್ತಿಲ್ಲ. ಆದ್ದರಿಂದ ಇದೀಗ ಪುಣೆ ಪೊಲೀಸರು ವಿನೂತನ ಪ್ಲಾನ್ ಮಾಡಿದ್ದಾರೆ.
ಹೌದು, ಪುಣೆಯಲ್ಲಿ ಜನರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಮರೆತು ಓಡಾಡುತ್ತಿರುವುದಕ್ಕೆ ಈ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಫೋಟೋವೊಂದಕ್ಕೆ ಬ್ಲರ್ ಮಾಡಿ, ಇದರಲ್ಲಿ ಅಪಾಯಕಾರಿ ವಿಷಯವಿದೆ ಎಂದು ಬರೆದಿದ್ದಾರೆ. ಬಳಿಕ ಪೋಸ್ಟ್‌ನಲ್ಲಿ ಮಾಸ್ಕ್ ಧರಿಸದೇ ಓಡಾಡುವುದು ಹಾಗೂ ಸಾಮಾಜಿಕ ಅಂತರ ಮರೆತು ಹೋಗುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ಪೋಸ್ಟ್ ಮಾಡಿದ್ದಾರೆ.
ಇದೀಗ ಈ ಪೋಸ್ಟ್ ಭಾರಿ ವೈರಲ್ ಆಗಿದ್ದು, ನೂರಾರು ಮಂದಿ ಪುಣೆ ಪೊಲೀಸರ ಈ ಕ್ರಿಯಾಶೀಲ ಪೋಸ್ಟ್‌ಗೆ ಶಹಬಾಸ್‌ಗಿರಿ ನೀಡಿದ್ದಾರೆ. ಆನೇಕ ಮಂದಿ ಈ ಪೋಸ್ಟ್‌ನ್ನು ಲೈಕ್ ಮಾಡಿದ್ದು, ಸಾವಿರಾರು ಕಾಮೆಂಟ್ ಹಾಗೂ ರೀಟ್ವೀಟ್‌ಗಳು ಆಗಿವೆ.