alex Certify ಲಸಿಕೆ ಲಭ್ಯತೆ ಕುರಿತು ಫೈಜರ್​ ಸಿಇಓ​ ಹೇಳಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಲಭ್ಯತೆ ಕುರಿತು ಫೈಜರ್​ ಸಿಇಓ​ ಹೇಳಿದ್ದೇನು ಗೊತ್ತಾ…?

ಭಾರತದಲ್ಲಿ ಲಸಿಕೆ ಲಭ್ಯತೆಯ ಬಗ್ಗೆ ಮಾಹಿತಿ ಕೋರಿ ಅಮೆರಿಕದ ಫೈಜರ್​ ಕಂಪನಿ ಚೇರ್​ಮನ್​ ಹಾಗೂ ಸಿಇಓಗೆ ಪುಣೆ ಮೂಲದ ವ್ಯಕ್ತಿಯೊಬ್ಬರು ಇ ಮೇಲ್​ ಮಾಡಿದ್ದಾರೆ. ವಿಶೇಷ ಅಂದ್ರೆ ಶ್ರೀಸಾಮಾನ್ಯನ ಇ ಮೇಲ್​ಗೆ ಫೈಜರ್​ ಕಂಪನಿ ಚೇರ್​​ಮನ್​ ಹಾಗೂ ಸಿಇಓ ಆಲ್ಬರ್ಟ್​ ಬೌರ್ಲಾ ಪ್ರತಿಕ್ರಿಯೆ ನೀಡಿದ್ದಾರೆ.

58 ವರ್ಷದ ಪ್ರಕಾಶ್​ ಮಿರ್ಪುರಿ ಎಂಬವರು ಮೇ 26ರಂದು ಬೌರ್ಲಾಗೆ ಮಾಡಿದ ಇ ಮೇಲ್​ಗೆ ಅಂದೇ ಬೌರ್ಲಾ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕಾಶ್​ ಹಾಗೂ ಅವರ ಕುಟುಂಬಸ್ಥರ ಆರೋಗ್ಯ ವಿಚಾರಿಸಿರುವ ಬೌರ್ಲಾ ಭಾರತದಲ್ಲಿ ಫೈಜರ್​ ಲಸಿಕೆ ಲಭ್ಯತೆಯ ಬಗ್ಗೆ ಪ್ರಶ್ನೆ ಮಾಡಿದ್ದಕ್ಕಾಗಿ ಪ್ರಕಾಶ್​ಗೆ ಧನ್ಯವಾದ ಅರ್ಪಿಸಿದ್ರು.

ಅಲ್ಲದೇ ಭಾರತದಲ್ಲಿ ಫೈಜರ್​ ಲಸಿಕೆಗೆ ಅನುಮೋದನೆಯನ್ನ ಪಡೆಯಲು ಎಲ್ಲಾ ರೀತಿಯ ಪ್ರಯತ್ನಗಳನ್ನ ಮಾಡ್ತಿರೋದಾಗಿ ಪತ್ರದ ಮೂಲಕ ಉತ್ತರಿಸಿದ್ದಾರೆ. ಭಾರತದಿಂದ ನಮ್ಮ ಲಸಿಕೆಗೆ ಇನ್ನೂ ಅಧಿಕೃತ ಅನುಮೋದನೆ ದೊರಕಿಲ್ಲ. ಭಾರತದಲ್ಲಿ ಫೈಜರ್​ ಲಸಿಕೆಯನ್ನ ಪೂರೈಕೆ ಮಾಡುವ ಸಲುವಾಗಿ ಸರ್ಕಾರದೊಂದಿಗೆ ಎಲ್ಲಾ ರೀತಿಯ ಮಾತುಕತೆಯನ್ನ ನಡೆಸುತ್ತಿದ್ದೇವೆ ಎಂದು ಬೌರ್ಲಾ ಬರೆದಿದ್ದಾರೆ.

ಮಾರ್ಚ್​ 18ರಂದು ಕೊರೊನಾ ಸೋಂಕಿಗೆ ಒಳಗಾಗಿದ್ದ ಪ್ರಕಾಶ್​ ಹಾಗೂ ಅವರ ಕುಟುಂಬಸ್ಥರು ಬಳಿಕ ಏಪ್ರಿಲ್​ 1ರಂದು ಕೊರೊನಾ ಲಸಿಕೆಗಾಗಿ ನೋಂದಣಿ ಮಾಡಿದ್ದರು. ಕೊರೊನಾ ಸೋಂಕಿಗೆ ಒಳಗಾಗಿದ್ದ ಸಂದರ್ಭದಲ್ಲಿ ಪ್ರಕಾಶ್​ ಪ್ರಪಂಚದಲ್ಲಿ ಪ್ರಸ್ತುತ ಲಭ್ಯವಿರುವ ಎಲ್ಲಾ ಲಸಿಕೆಗಳು ಹಾಗೂ ಅವುಗಳ ಪರಿಣಾಮಕಾರತ್ವದ ಬಗ್ಗೆ ಅಧ್ಯಯನ ಮಾಡಿದ್ದರು.

ವಿದೇಶಿ ಸ್ನೇಹಿತರ ಜೊತೆಯೂ ಸಂಪರ್ಕ ಹೊಂದಿದ್ದ ಪ್ರಕಾಶ್​ ಅಮೆರಿಕದ ಗೆಳೆಯನೊಬ್ಬ ಫೈಜರ್​ ಲಸಿಕೆ ಎಲ್ಲಕ್ಕಿಂತ ಉತ್ತಮವಾಗಿದೆ ಎಂದು ಹೇಳಿದ್ದರಂತೆ. ಇದೇ ಕಾರಣಕ್ಕಾಗಿ ಪ್ರಕಾಶ್​ ಭಾರತದಲ್ಲಿ ಈ ಲಸಿಕೆ ಯಾವಾಗ ಲಭ್ಯವಾಗುತ್ತೆ ಎಂಬ ಮಾಹಿತಿಯನ್ನ ಪಡೆಯಲು ಇ ಮೇಲ್​ ಮಾಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...