ಕಳೆದ 10 ದಿನಗಳಿಂದ ಹೋಮ್ ಐಸೋಲೇಷನ್ನಲ್ಲಿದ್ದ 45 ವರ್ಷದ ವ್ಯಕ್ತಿಯ ಸ್ಥಿತಿ ಕಳೆದ 2 ದಿನಗಳಿಂದ ಗಂಭೀರವಾಗಿದ್ದು ಆತ ಸಾವನ್ನಪ್ಪಿದ ಘಟನೆ ಪುಣೆಯಲ್ಲಿ ನಡೆದಿದೆ.
ಪಿಂಪ್ರಿ ಚಿಂಚ್ವಾಡ್ದ ಕಸರವಾಡಿ ಏರಿಯಾದ ಉದ್ಯಮಿ ಶ್ರೀಕಂತ್ ಗಾಯಕ್ವಾಡ ಏಪ್ರಿಲ್ 6ನೇ ತಾರೀಖಿನಿಂದ ಜ್ವರ ಹಾಗೂ ಮೈ ಕೈ ನೋವಿನಿಂದ ಬಳಲುತ್ತಿದ್ದರು. ಖಾಸಗಿ ಪ್ರಯೋಗಾಲಯದಲ್ಲಿ ಕೊರೊನಾ ಪರೀಕ್ಷೆಗೆ ಒಳಗಾದ ಶ್ರೀಕಾಂತ್ಗೆ ನೆಗೆಟಿವ್ ರಿಪೋರ್ಟ್ ದೊರಕಿತ್ತು. ಇದಾದ ಬಳಿಕ ಏಪ್ರಿಲ್ 10ರಂದು ಶ್ರೀಕಾಂತ್ ದೇಹದ ಸ್ಥಿತಿ ಸುಧಾರಿಸಿದ ಕಾರಣ ಮತ್ತೊಮ್ಮೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು.
ಎರಡನೇ ಪರೀಕ್ಷೆ ವೇಳೆ ಶ್ರೀಕಾಂತ್ ಸೋಂಕಿಗೆ ಒಳಗಾಗಿದ್ದಾರೆ ಎಂಬ ಮಾಹಿತಿ ಬಯಲಾಗಿದೆ. ಆದರೆ ಆಸ್ಪತ್ರೆ ವೈದ್ಯರು ಶ್ರೀಕಾಂತ್ರನ್ನ ತಪಾಸಣೆ ಮಾಡಿಲ್ಲ. ಬದಲಾಗಿ ಹೋಮ್ ಐಸೋಲೇಷನ್ ಅರ್ಜಿಯನ್ನ ತುಂಬುವಂತೆ ಹೇಳಿದ್ದಾರೆ. ಅಲ್ಲದೇ 10 ದಿನಗಳ ಕಾಲ ಐಸೋಲೇಷನ್ನಲ್ಲಿ ಇರಿ ಎಂದು ಸೂಚನೆ ನೀಡಿದ್ದರು ಎಂದು ಮೃತ ಶ್ರೀಕಾಂತ್ ಆಪ್ತ ಅವಿನಾಶ್ ಪ್ರಸಾದ್ ಹೇಳಿದ್ದಾರೆ.
ಏಪ್ರಿಲ್ 13ನೇ ತಾರೀಖಿನಂದು ಶ್ರೀಕಾಂತ್ಗೆ ವಾಂತಿ ಶುರುವಾಗಿದೆ. ಕೂಡಲೇ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಆದರೆ ಐದು ದಿನಗಳ ಕಾಲ ಹೋರಾಟ ನಡೆಸಿದ ಶ್ರೀಕಾಂತ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ರು.
ಇನ್ನು ಈ ವಿಚಾರವಾಗಿ ಮಾತನಾಡಿದ ಮೃತ ಶ್ರೀಕಾಂತ್ ತಮ್ಮ ಶ್ರೀಧರ್, ಏಪ್ರಿಲ್ 10ನೇ ತಾರೀಖು ನನ್ನ ಸಹೋದರ ವೈಸಿಎಂ ಆಸ್ಪತ್ರೆಗೆ ತೆರಳಿದ್ದರು. ಆದರೆ ಅಲ್ಲಿ ಹೋಂ ಕ್ವಾರಂಟೈನ್ನಲ್ಲಿ ಇರಿ ಎಂದು ಸೂಚನೆ ನೀಡಿದ್ರು. ಮನೆಯಲ್ಲೇ ಇದ್ದ ಶ್ರೀಕಾಂತ್ ದೇಹದಲ್ಲಿ ಆಮ್ಲಜನಕ ಕೊರತೆ ಉಂಟಾಗಿದೆ ಹಾಗೂ ಬಿಳಿ ರಕ್ತಕಣಗಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಹೇಳಿದ್ರು.
ಶ್ರೀಕಾಂತ್ಗೆ ರೆಮಿಡಿಸಿವರ್ ಚುಚ್ಚುಮದ್ದು ಹಾಗೂ ಪ್ಲಾಸ್ಮಾ ಥೆರಪಿಗಳನ್ನ ಮಾಡಲಾಯ್ತು. ಇದಾದ ಬಳಿಕ ಶ್ರೀಕಾಂತ್ ಕೊಂಚ ಸುಧಾರಿಸಿಕೊಳ್ಳಲು ಆರಂಭಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಅವರ ಆರೋಗ್ಯ ಮತ್ತೆ ಕುಸಿಯಲು ಆರಂಭಿಸಿತು. ಹಾಗೂ ನನ್ನ ಸಹೋದರ ಮೃತಪಟ್ಟರು ಎಂದು ಶ್ರೀಧರ್ ಹೇಳಿದ್ರು.
ಇನ್ನೂ ಈ ವಿಚಾರವಾಗಿ ಮಾತನಾಡಿರುವ ವೈಸಿಎಂಹೆಚ್ ಆಸ್ಪತ್ರೆ ವೈದ್ಯ ಡಾ. ರಾಜೇಂದ್ರ, ರೋಗಿಯ ಲಕ್ಷಣಗಳನ್ನ ಆಧರಿಸಿದ ವೈದ್ಯರು ಹೋಂ ಐಸೋಲೇಷನ್ಗೆ ಸೂಚನೆಯನ್ನ ನೀಡುತ್ತಾರೆ. ಸೌಮ್ಯ ಲಕ್ಷಣಗಳನ್ನ ಹೊಂದಿರುವವರಿಗೆ ಮಾತ್ರ ಮನೆಯಲ್ಲಿ ಸೋಂಕಿಗೆ ಚಿಕಿತ್ಸೆಯನ್ನ ಪಡೆಯಲು ಅವಕಾಶವಿದೆ. ಅತಿಯಾದ ಲಕ್ಷಣ ಹೊಂದಿರುವವರಿಗೆ ಮನೆಯಲ್ಲಿರಲು ಅವಕಾಶವಿಲ್ಲ. ಈ ಘಟನೆ ಬಳಿಕ ನಾವು ವೈದ್ಯರಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ಹೇಳಿದ್ರು.