ಅನಿರೀಕ್ಷಿತವಾದ ಲಾಕ್‌ಡೌನ್ ಮೂಲಕ ಅಯೋಮಯವಾಗಿ ಸಾಗಿದ 2020ರ ನೆನಪುಗಳಿಂದ ಹೊರಬಂದು 2021ರಲ್ಲಿಯಾದರೂ ಭರವಸೆಯ ಬೆಳಕು ಕಾಣುವುದೇ ಎಂದು ಇಡೀ ಮನುಕುಲ ಹಪಾಹಪಿಸುತ್ತಿದೆ.
ಇದೇ ಥೀಮ್ ಮೇಲೆ ಪುಣೆಯ ಕಲಾವಿದ ಆದಿತ್ಯ ಶಿರ್ಕೆ ಪೊರಕೆ ಹಾಗೂ ಮಾಪ್‌ಗಳನ್ನು ಬಳಸಿಕೊಂಡು ವಿಶಿಷ್ಟವಾದ ಚಿತ್ರವೊಂದನ್ನು ರಚಿಸಿದ್ದಾರೆ. ’ಅನ್‌ಲೀಶಿಂಗ್ ಡಾರ್ಕ್ ಹಾಸ್’ ಹೆಸರಿನ ಈ ಚಿತ್ರದಲ್ಲಿ ಕಪ್ಪು ಕುದುರೆಯೊಂದರ ಚಿತ್ರ ಬರೆಯಲಾಗಿದೆ.
ಬಹಳ ಬಲಶಾಲಿಯಾದ ಕಪ್ಪು ಕುದುರೆಯು, ಕಲಾವಿದರ ದೃಷ್ಟಿಯಲ್ಲಿ, ಇದೀಗ ತಾನೇ ಕಳೆದುಹೋದ ಹಳೆಯ ವರ್ಷ ಹಾಗೂ ಸ್ವಾಗತಿಸಲ್ಪಟ್ಟ ಹೊಸ ವರ್ಷವನ್ನು ಸೂಚಿಸುತ್ತಿದೆಯಂತೆ.
“ರೇಸ್ ಗೆಲ್ಲುವ ಫೇವರಿಟ್ ಅಲ್ಲದೇ ಇರುವವರೊಬ್ಬರು ಗೆಲ್ಲುವ ಸಾಧ್ಯತೆ ಇದುವಂತೆ, 2021 ಸಹ ಆಗಬಹುದು” ಎಂದ ಆಶಯವನ್ನು ಶಿರ್ಕೆ ತಮ್ಮ ಕಲೆಯ ಮೂಲಕ ವ್ಯಕ್ತಪಡಿಸಿದ್ದಾರೆ.