ಕೋವಿಡ್ ಲಾಕ್‌ಡೌನ್ ನಡುವೆ ಫಿಟ್ನೆಸ್ ಕಾಪಾಡಿಕೊಳ್ಳುವ ಸಂಬಂಧ ಅರಿವು ಮೂಡಿಸಲು ಮುಂದಾದ ಪುದುಚೆರಿಯ ವ್ಯಕ್ತಿಯೊಬ್ಬರು ಜಲಾಂತರಾಳದಲ್ಲಿ ವ್ಯಾಯಾಮ ಮಾಡುವ ತಮ್ಮ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ತರಬೇತಿ ಪಡೆದ ಡೈವರ್ ಆಗಿರುವ ಅರವಿಂದ್, ಚೆನ್ನೈ ಹಾಗೂ ಪುದುಚೆರಿಯ ಕಡಲತೀರದಲ್ಲಿ ಕಳೆದ 20 ವರ್ಷಗಳಿಂದ ಡೈವಿಂಗ್ ತರಬೇತಿ ನೀಡುತ್ತಾ ಬಂದಿದ್ದಾರೆ. ತಾವು ನೀರಿನಾಳದಲ್ಲಿ ವ್ಯಾಯಾಮ ಮಾಡುವುದಾದರೆ ಯಾರು ಬೇಕಾದರೂ ನೆಲದ ಮೇಲೆ ಖಂಡಿತವಾಗಿಯೂ ವ್ಯಾಯಾಮ ಮಾಡಬಲ್ಲರು ಎಂದು ಅರವಿಂದ್ ಹೇಳುತ್ತಾರೆ.
ʼಲಾಕ್ ಡೌನ್ʼನಿಂದ ಮುಕ್ತಿ: ಬೀದಿಗೆ ಬಂದು ಸಂಭ್ರಮಿಸಿದ ಸ್ಪೇನ್ ಜನತೆ
ನೀರಿನಾಳಕ್ಕೆ 14 ಮೀಟರ್ ಡೈವ್ ಮಾಡಿರುವ ಅರವಿಂದ್, ಕಣ್ಣಿಗೆ ರಕ್ಷಣಾತ್ಮಕ ಸಾಧನ ಧರಿಸಿ, ಸಮುದ್ರದ ತಳದ ಮೇಲೆ ವರ್ಕ್‌ಔಟ್ ಮಾಡಿದ್ದಾರೆ. ಪ್ರತಿನಿತ್ಯವೂ 45 ನಿಮಿಷಗಳ ಕಾಲ ಉಸಿರಾಟ ಸಂಬಂಧಿ ವ್ಯಾಯಾಮಗಳನ್ನು ಜನರು ಮಾಡಬೇಕೆಂದು ತಿಳಿಸುವ ಅರವಿಂದ್, ಇದರಿಂದ ಶ್ವಾಸಕೋಶಗಳು ಬಲಿಷ್ಠವಾಗುವುದಲ್ಲದೇ ನಮ್ಮಲ್ಲಿನ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದಿದ್ದಾರೆ.