ಶರ್ವಿತ್ ಪಾಲ್ ಚಾಮರ್ ಎಂಬ ಹೆಸರಿನ ದಲಿತ ವ್ಯಕ್ತಿ ತಮ್ಮ ಮನೆಗೆ “ಚಾಮರ್ ಭವನ” ಎಂದು ಹೆಸರಿಟ್ಟಿದ್ದಾರೆ. ಅದಕ್ಕೆ ಕಾರಣವನ್ನು ಅವರು ಟ್ವಿಟ್ಟರ್ ನಲ್ಲಿ ನೀಡಿದ್ದು, ನೋಡಿದ ಜನ ಸ್ಪೂರ್ತಿ ಪಡೆದಿದ್ದಾರೆ.
ಅವರು ಟ್ವಿಟ್ಟರ್ ನಲ್ಲಿ 2 ನಿಮಿಷ 11 ಸೆಕೆಂಡ್ ನ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ. ಅದರಲ್ಲಿ “ಸಿಖ್, ಮುಸ್ಲಿಂ, ಬ್ರಾಹ್ಮಣರು ತಮ್ಮ ವಂಶದ ಹೆಸರನ್ನು ಅವರ ಮನೆಗಳಿಗೆ ಇಡುತ್ತಾರೆ. ನಾನೂ ಒಬ್ಬ ಚಾಮರ್ ಎಂದು ಹೇಳಲು ಹೆಮ್ಮೆ ಪಡುತ್ತೇನೆ” ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಶರ್ವಿತ್ ಅವರ ಪುತ್ರ ತನ್ನ ವೈಫೈ ಪಾಸ್ ವರ್ಡ್ ನ್ನೂ ಚಾಮರ್ ಹೆಸರಿನಲ್ಲೆ ಇಟ್ಟಿದ್ದಾನೆ ಎನ್ನಲಾಗಿದೆ. ಶತಮಾನಗಳಿಂದ ಜಾತಿ ತಾರತಮ್ಯ ನಡೆದಿದೆ. ಅದನ್ನು ತೆಗೆದು ಹಾಕಬೇಕು ಎಂಬುದು ಶರ್ವಿತ್ ಅವರ ಅಭಿಮತ.
https://twitter.com/PunYaab/status/1344142954244362240?ref_src=twsrc%5Etfw%7Ctwcamp%5Etweetembed%7Ctwterm%5E1344142954244362240%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fproud-of-who-i-am-dalit-man-names-his-home-chamar-bhawan-viral-video-is-winning-hearts-online-3228794.html