ಪೊಲೀಸ್ ಇಲಾಖೆಯಲ್ಲಿ ತನಗಿಂತ ಮೇಲಿನ ಸ್ಥಾನಕ್ಕೆ ನೇಮಕವಾಗಿರುವ ಮಗಳಿಗೆ ತಂದೆ ಸೆಲ್ಯೂಟ್ ಮಾಡುವ ಅವಿಸ್ಮರಣೀಯ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ತಿರುಪತಿಯ ಕಲ್ಯಾಣಿ ಅಣೆಕಟ್ಟು ಬಳಿ ಇರುವ ಪೊಲೀಸ್ ತರಬೇತಿ ಕೇಂದ್ರದಲ್ಲಿ ಈ ಅಪರೂಪದ ಘಟನೆ ಸಂಭವಿಸಿದೆ.
ತಿರುಪತಿಯ ಪೊಲೀಸ್ ತರಬೇತಿ ಕೇಂದ್ರದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಯೆಂಡಲೂರು ಶ್ಯಾಮ್ ಸುಂದರ್ ಭಾನುವಾರ ಸಂಜೆ ತಮ್ಮ ಮಗಳು ವೈ ಜೆಸ್ಸಿ ಪ್ರಶಾಂತಿ ಅದೇ ಪೊಲೀಸ್ ಡ್ಯೂಟಿ ಮೀಟ್ನಲ್ಲಿ ಭಾಗಿಯಾಗಿರೋದನ್ನ ಗಮನಿಸಿದರು.
ಜೆಸ್ಸಿ ಪ್ರಶಾಂತಿ ತನ್ನ ತಂದೆಯನ್ನ ನೋಡುತ್ತಿದ್ದಂತೆಯೇ ಅವರನ್ನ ಮಾತನಾಡಿಸೋಕೆ ತೆರಳಿದ್ರು. ಕೂಡಲೇ ಶ್ಯಾಮ್ ಸುಂದರ್ ತನಗಿಂತ ಮೇಲಿನ ಸ್ಥಾನದಲ್ಲಿರುವ ಮಗಳಿಗೆ ಹೆಮ್ಮೆಯಿಂದ ಸೆಲ್ಯೂಟ್ ಮಾಡಿದ್ದಾರೆ. ಆದರೆ ಪ್ರಶಾಂತಿ ತಂದೆಯನ್ನ ಗೌರವಿಸಿ ಮಾತುಕತೆ ನಡೆಸಿದ್ದಾರೆ.
ನಾನು ನನ್ನ ತಂದೆಯನ್ನ ಹಾಗೂ ಪೊಲೀಸ್ ಇಲಾಖೆ ಬಗೆಗಿನ ಅವರ ಶ್ರದ್ಧೆಯನ್ನ ಗಮನಿಸುತ್ತಲೇ ಬೆಳೆದವಳು. ತಮ್ಮ ಜವಾಬ್ದಾರಿಗೆ ನಮ್ಮ ತಂದೆ ಬದ್ಧರಾಗಿರ್ತಾರೆ. ಪೊಲೀಸ್ ಇಲಾಖೆಗೆ ನಾನು ನೇರ್ಪಡೆಯಾಗಲು ಅವರೇ ಸ್ಪೂರ್ತಿ. ಕರ್ತವ್ಯದಲ್ಲಿದ್ದಾಗ ನನ್ನ ತಂದೆ ನಡೆದುಕೊಳ್ಳುವ ರೀತಿಯನ್ನ ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ ಎಂದು ಜೆಸ್ಸಿ ಪ್ರಶಾಂತಿ ಹೇಳಿದ್ದಾರೆ.