ಕೊರೊನಾ ಸೋಂಕು ಹೆಚ್ಚಾಗ್ತಿದ್ದಂತೆ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ವ್ಯವಸ್ಥೆಯಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಮುನ್ನೆಚ್ಚರಿಕೆಯಾಗಿ ಕೆಲವರು ಆಕ್ಸಿಜನ್ ಸಿಲಿಂಡರ್ ಗಳನ್ನು ಮನೆಯಲ್ಲಿ ಸಂಗ್ರಹಿಸುತ್ತಿದ್ದಾರೆ.
ಆಕ್ಸಿಜನ್ ಮಟ್ಟ ಕಡಿಮೆಯಾಗ್ತಿದ್ದಂತೆ ಆತಂಕಪಡುವ ಅಗತ್ಯವಿಲ್ಲ. ಪ್ರತಿಯೊಬ್ಬರೂ ಮನೆಯಲ್ಲಿ ಪ್ರೋನಿಂಗ್ ಥೆರಪಿ ಮಾಡುವ ಮೂಲಕ ಆಕ್ಸಿಜನ್ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದ್ದು, ಅತಿ ಹೆಚ್ಚು ವೀಕ್ಷಣೆ ಪಡೆದಿದೆ.
ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಪ್ರೋನಿಂಗ್ ಥೆರಪಿ ಬಗ್ಗೆ ಈ ವಿಡಿಯೋದಲ್ಲಿ ಸರಿಯಾದ ಮಾಹಿತಿ ಪಡೆಯಬಹುದು. ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಶೀರ್ಷಿಕೆಯಲ್ಲಿ ಬರೆದಿದ್ದಾರೆ, ಯುಪಿ ಯಲ್ಲಿ 82 ವರ್ಷದ ವೃದ್ಧ ಮಹಿಳೆ ಆಮ್ಲಜನಕ ಮಟ್ಟ ಕಡಿಮೆಯಾಗಿತ್ತು. ಆಕೆಗೆ ಪ್ರೋನಿಂಗ್ ಥೆರಪಿ ಮೂಲಕ ಚಿಕಿತ್ಸೆ ನೀಡಲಾಗಿದೆ. ಈ ಚಿಕಿತ್ಸೆಯಿಂದ 4 ದಿನಗಳಲ್ಲಿ ಆಮ್ಲಜನಕದ ಮಟ್ಟವನ್ನು 89 ರಿಂದ 97 ಕ್ಕೆ ಹೆಚ್ಚಿಸಲಾಯಿತು. ಇದು ಬಹಳ ಪರಿಣಾಮಕಾರಿ ಎಂದು ಅವರು ಬರೆದಿದ್ದಾರೆ.
ಒಂದು ನಿಮಿಷ 40 ಸೆಕೆಂಡ್ ನ ಈ ವಿಡಿಯೋವನ್ನು 25 ಸಾವಿರಕ್ಕೂ ಹೆಚ್ಚು ಜನರು ನೋಡಿದ್ದಾರೆ. ಆಮ್ಲಜನಕ ಮಟ್ಟ ಕಡಿಮೆ ಇರುವವರು ಮನೆಯಲ್ಲಿಯೇ ಈ ಥೆರಪಿ ಮೂಲಕ ಆಮ್ಲಜನಕ ಮಟ್ಟವನ್ನು ಹೆಚ್ಚಿಸಬಹುದೆಂದು ಅವರು ಹೇಳಿದ್ದಾರೆ. ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಇದ್ರ ಬಗ್ಗೆ ಗೊತ್ತಿರಬೇಕೆಂದು ಅವರು ಹೇಳಿದ್ದಾರೆ.