alex Certify ಖಾಕಿ ಚಡ್ಡಿ ಧರಿಸಿರುವ ಪ್ರಧಾನಿ ಮೋದಿ ಫೋಟೋ ಶೇರ್‌ ಮಾಡಿ ವ್ಯಂಗ್ಯವಾಡಿದ ಪ್ರಿಯಾಂಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಕಿ ಚಡ್ಡಿ ಧರಿಸಿರುವ ಪ್ರಧಾನಿ ಮೋದಿ ಫೋಟೋ ಶೇರ್‌ ಮಾಡಿ ವ್ಯಂಗ್ಯವಾಡಿದ ಪ್ರಿಯಾಂಕಾ

ಹರಿದ ಜೀನ್ಸ್​ಗಳ ಬಗ್ಗೆ ಉತ್ತರಾಖಂಡ್​ ಸಿಎಂ ತಿರಥ್ ಸಿಂಗ್​​ ರಾವತ್​ ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗ್ತಿದೆ. ಟ್ವಿಟರ್ ಅಭಿಯಾನಗಳ ಮೂಲಕ ಮಹಿಳೆಯರು, ಸೆಲೆಬ್ರಿಟಿಗಳು ಹರಿದ ಜೀನ್ಸ್ ಹಾಕಿದ ಫೋಟೋವನ್ನ ಶೇರ್​ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕ್ತಿದ್ದಾರೆ.

ಇದೀಗ ಈ ಅಭಿಯಾನಕ್ಕೆ ಸಾಥ್​ ನೀಡಿರುವ ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ ಟ್ವೀಟ್​ ಒಂದನ್ನ ಮಾಡಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಸಚಿವ ನಿತಿನ್​ ಗಡ್ಕರಿ, ಆರ್​ಎಸ್​ಎಸ್​ನ ಮೋಹನ್​ ಭಾಗ್ವತ್​ ಖಾಕಿ ಚಡ್ಡಿ ಹಾಕಿರುವ ಫೋಟೋ ಶೇರ್​ ಮಾಡಿ ಅಯ್ಯೋ ದೇವರೆ..! ಮೊಣಕಾಲು ಕಾಣುತ್ತಿದೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಟ್ವೀಟ್​ಗೆ ಪ್ರಿಯಾಂಕಾ ಗಾಂಧಿ ವಾದ್ರಾ #rippedjeans ಹ್ಯಾಶ್​ಟ್ಯಾಗ್​ನ್ನು ಬಳಕೆ ಮಾಡಿದ್ದಾರೆ.

ಉತ್ತರಾಖಂಡ್​ ಸಿಎಂ ತಿರಥ್​ ಸಿಂಗ್​ ರಾವತ್​ ಯುವಜನತೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಹರಿದ ಜೀನ್ಸ್ ಟ್ರೆಂಡ್​ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹರಿದ ಜೀನ್ಸ್ ಧರಿಸಿ ಮೊಣಕಾಲು ಕಾಣಿಸಿಕೊಂಡು ತಿರುಗುವ ಅನೇಕ ಮಹಿಳೆಯರು ತಮ್ಮನ್ನ ತಾವು ಏನೋ ಎಂದು ತಿಳಿದುಕೊಳ್ತಾರೆ. ಇವರು ಸಮಾಜಕ್ಕೆ ಎಂತಹ ಸಂದೇಶ ನೀಡಬಲ್ಲರು ಎಂದು ಪ್ರಶ್ನೆ ಮಾಡಿದ್ದರು.

ತಿರಥ್​ ಸಿಂಗ್​ರ ಈ ಹೇಳಿಕೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಸಾಕಷ್ಟು ಸೆಲೆಬ್ರಿಟಿಗಳು, ರಾಜಕಾರಣಿಗಳು ಹಾಗೂ ಸಾಮಾನ್ಯ ಜನತೆ ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಹೊರಹಾಕ್ತಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...