
ರಾಮಪುರಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ದಟ್ಟವಾದ ಮಂಜಿನ ಕಾರಣ ರಸ್ತೆ ಕಾಣದ ಹಿನ್ನೆಲೆ ಕಾರನ್ನ ನಿಲ್ಲಿಸಲಾಯ್ತು. ಕಾರಿನಿಂದ ಇಳಿದ ಪ್ರಿಯಾಂಕ ತಾವೇ ಕಾರಿನ ಗ್ಲಾಸ್ನ್ನ ಸ್ವಚ್ಛಗೊಳಿಸಿದ್ದು ವಿಡಿಯೋ ವೈರಲ್ ಆಗಿದೆ.
ಪರೋಕ್ಷವಾಗಿ ಮೋದಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ ಕ್ರಿಕೆಟಿಗರು, ಸೆಲೆಬ್ರಿಟಿಗಳಿಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಟಾಂಗ್
ವಿಡಿಯೋದಲ್ಲಿ ಕಾರಿನಿಂದಿಳಿದಿರುವ ಪ್ರಿಯಾಂಕ ಗಾಂಧಿ ಬಟ್ಟೆಯನ್ನ ಹಿಡಿದು ಕಾರಿನ ಗಾಜನ್ನ ಸ್ವಚ್ಛಗೊಳಿಸುತ್ತಿದ್ದಾರೆ. ಕೂಡಲೇ ಪ್ರಿಯಾಂಕ ಸಮೀಪ ಬಂದ ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಪ್ರಿಯಾಂಕಾಗೆ ಕಾರಿನಲ್ಲಿ ಕೂರಲು ಹೇಳಿ ತಾವೇ ಗಾಜನ್ನ ಸ್ವಚ್ಛಗೊಳಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ರಾಮಪುರದ ಮೃತ ರೈತ ನವ್ರೀತ್ ಸಿಂಗ್ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಇನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆಯೇ ನೆಟ್ಟಿಗರು ಪ್ರಿಯಾಂಕ ಗಾಂಧಿ ಕಾಲೆಳಿದಿದ್ದಾರೆ. ಒಬ್ಬ ನೆಟ್ಟಿಗ ರಾಜಕೀಯ ಬಿಟ್ಟು ಇದೇ ಕೆಲಸ ಮಾಡು ಎಂದು ಹೇಳಿದ್ದರೆ ಇನ್ನೊಬ್ಬರು ಮಹಾ ನಾಟಕ ಎಂದು ಜರಿದಿದ್ದಾರೆ.
ಇನ್ನೊಬ್ಬರು ನೀವು ಸಂಘರ್ಷ ಮುಂದುವರಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ .