ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಮಹತ್ವದ ಕೆಲಸ ಮಾಡಲಿದೆ. ಲಸಿಕೆ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. ಮೇ.1ರಿಂದ 18 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ ಹಾಕಲಾಗ್ತಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸೇರಿ ಉಚಿತವಾಗಿ ಕೊರೊನಾ ಲಸಿಕೆ ನೀಡ್ತಿದೆ. ಖಾಸಗಿ ಕಂಪನಿಗಳಲ್ಲಿ ಲಸಿಕೆಗೆ ಶುಲ್ಕ ವಿಧಿಸಲಾಗ್ತಿದೆ.
ಲಸಿಕೆಯ ಮೊದಲ ಹಾಗೂ ಎರಡನೇ ಅಭಿಯಾನದಲ್ಲಿ 150 ರೂಪಾಯಿ ಡೋಸ್ ನಂತೆ ಸರ್ಕಾರ, ಕಂಪನಿಗಳಿಂದ ಲಸಿಕೆ ಖರೀದಿ ಮಾಡಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ಹಾಕಲಾಗ್ತಿತ್ತು. ಖಾಸಗಿ ಆಸ್ಪತ್ರೆಗಳಿಗೆ 250 ರೂಪಾಯಿ ಡೋಸ್ ನಂತೆ ಶುಲ್ಕ ವಿಧಿಸಲಾಗಿತ್ತು. ಮೂರನೇ ಅಭಿಯಾನದಲ್ಲಿ ಬೆಲೆ ಹೆಚ್ಚಾಗಿದೆ.
ಕೊರೊನ ವೈರಸ್ ನಿಂದ ರಕ್ಷಣೆ ಪಡೆಯಲು ಕೋವಿಶೀಲ್ಡ್ ಲಸಿಕೆ ಪಡೆಯಲು ಬಯಸಿದ್ದರೆ ಒಂದು ಡೋಸ್ ಗೆ 700ರಿಂದ 900 ರೂಪಾಯಿವರೆಗೆ ಖರ್ಚು ಮಾಡಬೇಕಾಗುತ್ತದೆ. ಕೋವ್ಯಾಕ್ಸಿನ್ ಲಸಿಕೆಗಾಗಿ 1250ರಿಂದ 1500 ರೂಪಾಯಿ ಖರ್ಚು ಮಾಡಬೇಕಾಗುತ್ತದೆ.
ಖಾಸಗಿ ಆಸ್ಪತ್ರೆಗಳು ಕೋವಿಶೀಲ್ಡ್ ಲಸಿಕೆಗೆ ಜಿಎಸ್ಟಿ ಸೇರಿಸಿ 660 ರಿಂದ 670 ರೂಪಾಯಿ ಖರ್ಚು ಮಾಡಬೇಕಿದೆ. ಇದ್ರಲ್ಲಿ ಶೇಕಡಾ 5 ರಿಂದ 6ರಷ್ಟು ಲಸಿಕೆ ಹಾಳಾಗುತ್ತಿದೆ. ಆಸ್ಪತ್ರೆಗಳಿಗೆ ಪ್ರತಿ ಡೋಸ್‌ಗೆ 710 ರಿಂದ 715 ರೂಪಾಯಿಗಳಷ್ಟು ವೆಚ್ಚವಾಗುತ್ತದೆ. ಇದರ ನಂತರ ಖಾಸಗಿ ಆಸ್ಪತ್ರೆಗಳು ಲಸಿಕೆ ಅನ್ವಯಿಸಲು 170 ರಿಂದ 180 ರೂಪಾಯಿ ಪಡೆಯುತ್ತಿವೆ. ಹ್ಯಾಂಡ್ ಸ್ಯಾನಿಟೈಜರ್, ಸಿಬ್ಬಂದಿಗೆ ಪಿಪಿಇ ಕಿಟ್, ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿ ಇತ್ಯಾದಿಗಳ ವೆಚ್ಚ ಇದರಲ್ಲಿ ಸೇರಿದೆ. ಈ ರೀತಿಯಾಗಿ, ಕೋವಿಶೀಲ್ಡ್ ನಿವ್ವಳ ವೆಚ್ಚ 900 ರೂಪಾಯಿಗಳವರೆಗೆ ಹೆಚ್ಚಾಗಿದೆ.