ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್ ನಲ್ಲಿ ಜಾರಿಗೆ ತರಲಿರುವ ಮೂರು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಗುಜರಾತ್ ರೈತರಿಗಾಗಿ ಕಿಸಾನ್ ಸೂರ್ಯೋದಯ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಗಿರ್ನಾರ್ ನಲ್ಲಿ ರೋಪ್ ವೇ ನಿರ್ಮಿಸಲಾಗಿದೆ. ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಇನ್ಸ್ ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್, ಪಿಡಿಯಾಟ್ರಿಕ್ ಹಾರ್ಟ್ ಆಸ್ಪತ್ರೆ ಉದ್ಘಾಟನೆ ನೆರವೇರಿಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ನೀರಾವರಿಗಾಗಿ ಹಗಲು ವೇಳೆ ವಿದ್ಯುತ್ ಸರಬರಾಜು ಮಾಡಲು ಮುಖ್ಯಮಂತ್ರಿ ವಿಜಯ ರೂಪಾನಿ ನೇತೃತ್ವದ ಗುಜರಾತ್ ಸರ್ಕಾರ ಕಿಸಾನ್ ಸೂರ್ಯೋದಯ ಯೋಜನೆ ಘೋಷಿಸಿದೆ. ಯೋಜನೆಯಡಿ ರೈತರ ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆಯವರೆಗೆ ವಿದ್ಯುತ್ ನೀಡಲಾಗುವುದು. ಇದಕ್ಕಾಗಿ 3500 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.