ಕೊರೊನಾ ಆತಂಕದ ನಡುವೆ ಸಾರ್ವಕನಿಕರಿಗೆ ಮತ್ತೊಂದು ಶಾಕ್ ಎದುರಾಗಲಿದೆ. ಹೌದು, ಕೊರೊನಾ ನಿಯಂತ್ರಣಕ್ಕೆ ಎನ್ 95 ಮಾಸ್ಕ್ ಅಗತ್ಯವೆಂದು ಹೇಳಲಾಗಿತ್ತು. ಆದರೆ ಇದೀಗ ಈ ಮಾಸ್ಕ್ ಕಚ್ಚಾವಸ್ತುಗಳ ಸಪ್ಲೈ ಕಡಿಮೆಯಾಗಿರುವುದರಿಂದ ಮಾಸ್ಕ್‌ಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ದೇಶದಲ್ಲಿ ವೀನಸ್ ಸೇಫ್ಟಿ ಆ್ಯಂಡ್ ಹೆಲ್ತ್ ಹಾಗೂ ಮ್ಯಾಗ್ನಂ ಹೆಲ್ತ್ ಎನ್ನುವ ಎರಡು ಸಂಸ್ಥೆಗಳು ಎನ್ 95 ಮಾಸ್ಕ್‌ಗಳನ್ನು ತಯಾರಿಸುತ್ತವೆ. ಆವರಿಗೆ ಅಮೆರಿಕ ಹಾಗೂ ಜರ್ಮನಿಯಿಂದ ಕಚ್ಚಾವಸ್ತು ರವಾನೆಯಾಗುತ್ತಿತ್ತು. ಆದರೀಗ ಕಚ್ಚಾ ವಸ್ತುಗಳ ಬಾರದಿರುವುದರಿಂದ ದರ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಬಗ್ಗೆ ವೀನಸ್ ಸಂಸ್ಥೆ ನಿರ್ದೇಶಕ ಮಹೇಶ್ ಮಾತನಾಡಿದ್ದು, ಅಮೆರಿಕ ಹಾಗೂ ಜರ್ಮನಿಯಿಂದ ಕಚ್ಚಾ ವಸ್ತುಗಳು ಬರುತ್ತಿಲ್ಲ. ಕೇವಲ ಜಪಾನ್‌ನಿಂದ ತರಿಸಲಾಗುತ್ತಿದೆ. ಆದ್ದರಿಂದ ಈ ಕಚ್ಚಾವಸ್ತುಗಳು ಮುಂದಿನ 10 ದಿನಕ್ಕೆ ಆಗುತ್ತವೆ. ಬಳಿಕ ಉತ್ಪಾದನೆ ಕಡಿಮೆಯಾಗಲಿದೆ. ಆದರೆ ಎನ್ 95ನಷ್ಟೇ ಸುರಕ್ಷತೆ ಇರುವ ಎಫ್‌ಎಫ್‌ಪಿ 2 ಮಾಸ್ಕ್ ಕೂಡ ನೀಡಲಿದೆ. ಆದ್ದರಿಂದ ಅದನ್ನು ಬಳಸುವುದು ಸೂಕ್ತ. ಅವುಗಳಿಗೆ ಅಗತ್ಯವಿರುವ ಕಚ್ಚಾ ವಸ್ತುಗಳು ಸಿಗಲಿವೆ ಎಂದಿದ್ದಾರೆ.